ಶಾಸಕ ಪ್ರಸಾದ ಅಬ್ಬಯ್ಯ ಮನೆಯಲ್ಲಿ ನಾಟಿ ಕೋಳಿ,ಮಟನ್ ಬಿರಿಯಾನಿ,ರುಚಿ ಸವಿದ ಸಿಎಂ ಸಿದ್ಧರಾಮಯ್ಯ.
ಹುಬ್ಬಳ್ಳಿ:- ಇಂದು ಶಿಗ್ಗಾಂವ ಉಪ ಚುನಾವಣಾ ಪ್ರಚಾರ ಮುಗಿಸಿ ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಸಿದ್ಧರಾಮಯ್ಯ ನಾಟಿ ಕೋಳಿ ಸಾರು,ಮಟನ್ ಬಿರಿಯಾನಿ,ಖಡಕ್ ಜೋಳದ ರೊಟ್ಟಿ ಊಟ ಸವಿದರು.
ಹುಬ್ಬಳ್ಳಿಯಲ್ಲಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರ ಮನೆಗೆ ತೆರಳಿದ ಸಿಎಂ ಸಿದ್ಧರಾಮಯ್ಯಗೆ ಶಾಸಕ ಪ್ರಸಾದ ಅಬ್ಬಯ್ಯ ನಾಟಿ ಕೋಳಿ ಮತ್ತು ಮಟನ್ ಬಿರಿಯಾನಿ ಊಟ ಮಾಡಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ,ಮಾಜಿ ಸಚಿವ ಪಿ ಸಿ ಸಿದ್ಧನಗೌಡರ,ಶಾಸಕ ಎನ್ ಎಚ್ ಕೋನರೆಡ್ಡಿ ಮುಖಂಡ ರಾಜಶೇಖರ ಮೆಣಸಿನಕಾಯಿ ಹಾಗೂ ವಿಶಾಲ ಅಬ್ಬಯ್ಯ ಸೇರಿದಂತೆ ಹಲವು ಮುಖಂಡರು ಸಿಎಂ ಜೊತೆ ನಾಟಿ ಕೋಳಿ ರುಚಿ ಸವಿದರು.