ಕಿಂಗ್ ಕೊಹ್ಲಿಗೆ ಬರ್ತಡೇ ಸಂಭ್ರಮ: ವಿರಾಟ್ ಮಾಡಿದ 8 ದಾಖಲೆ ಬ್ರೇಕ್ ಮಾಡೋದು ಅಸಾಧ್ಯ!

Share to all

ವಿರಾಟ್ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ. 68 ಪಂದ್ಯಗಳಲ್ಲಿ 40 ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಕೇವಲ ಮೂವರು ನಾಯಕರು ಮಾತ್ರ ಇಂತಹ ಗೆಲುವಿನ ದಾಖಲೆ ಹೊಂದಿದ್ದಾರೆ

ಟೀಂ ಇಂಡಿಯಾದ ರನ್ ಮಷಿನ್, ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಹಲವು ದಾಖಲೆ ಗಳನ್ನು ಮುರಿದು ಶ್ರೇಷ್ಠ ಬ್ಯಾಟರ್ ಎಂಬ ಕೀರ್ತಿಗಳಿಸಿರುವ ವಿರಾಟ್ ಕೊಹ್ಲಿ ಅವರ ಕೆಲು ದಾಖಲೆಗಳನ್ನು ಬೇರೆಯವರು ಬ್ರೇಕ್ ಮಾಡೋದು ಅಸಾಧ್ಯ ಎಂದು ಹೇಳಲಾಗುತ್ತಿದೆ.

ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಏಕದಿನ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. 8000, 9000, 10000, 11000, 12000 ಮತ್ತು 13000 ಏಕದಿನ ರನ್‌ಗಳನ್ನು ವೇಗವಾಗಿ ಗಳಿಸಿದ ದಾಖಲೆಯನ್ನು ಅವರು ಮಾಡಿದ್ದಾರೆ. ಭವಿಷ್ಯದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಈ ವೇಗದಲ್ಲಿ ರನ್ ಗಳಿಸುವುದು ತುಂಬಾ ಕಷ್ಟಕರ ಎಂದು ಹೇಳಲಾಗುತ್ತಿದೆ.

ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 21 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ 20 ಪ್ರಶಸ್ತಿಗಳಿದ್ದರೆ, ಶಕೀಬ್ ಅಲ್ ಹಸನ್ 17 ಬಾರಿ ಈ ಸಾಧನೆ ಮಾಡಿದ್ದಾರೆ. ಪ್ರಸ್ತುತ, ಯಾವುದೇ ಸಕ್ರಿಯ ಕ್ರಿಕೆಟಿಗರು ಇಷ್ಟು ಪ್ರಶಸ್ತಿಗಳನ್ನು ಪಡೆದಿಲ್ಲ.

ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಇಲ್ಲಿಯವರೆಗೆ 10 ಏಕದಿನ ಶತಕಗಳನ್ನು ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 9 ಶತಕಗಳು ದಾಖಲಾಗಿದ್ದರೆ, ಆಸ್ಟ್ರೇಲಿಯಾ ವಿರುದ್ಧ 8 ಶತಕಗಳು ದಾಖಲಾಗಿವೆ. ಒಂದೇ ದೇಶದ ವಿರುದ್ಧ ಇಷ್ಟು ಶತಕ ಬಾರಿಸಿದ ವಿಚಾರದಲ್ಲಿ ಅವರ ಹತ್ತಿರ ಯಾರೂ ಇಲ್ಲ. ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧ 8 ಶತಕಗಳನ್ನು ಗಳಿಸಿದ್ದಾರೆ ಆದರೆ ಇತರ ದೇಶಗಳ ವಿರುದ್ಧ ಕೊಹ್ಲಿಯಷ್ಟು ಶತಕ ಗಳಿಸಿಲ್ಲ.

ವಿರಾಟ್ ಕೊಹ್ಲಿ 2023ರ ಏಕದಿನ ವಿಶ್ವಕಪ್‌ನಲ್ಲಿ 765 ರನ್ ಗಳಿಸಿ ಇತಿಹಾಸ ನಿರ್ಮಿಸಿದ್ದರು. ಇದಕ್ಕೂ ಮುನ್ನ ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ ಒಂದೇ ವಿಶ್ವಕಪ್‌ನಲ್ಲಿ 673 ರನ್ ಗಳಿಸಿದ್ರು. ಮುಂಬರುವ ದಿನಗಳಲ್ಲಿ ವಿರಾಟ್ ಕೊಹ್ಲಿಯ ಈ ದಾಖಲೆಯನ್ನು ಮುರಿಯುವುದು ಅಸಾಧ್ಯವೆಂದು ತೋರುತ್ತದೆ.

ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಲ್ಲಿ ಮೂರು ತಂಡಗಳ ವಿರುದ್ಧ 600ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್ಮನ್ 6 ಬಾರಿ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ (2014-15), ಇಂಗ್ಲೆಂಡ್ (2016) ಮತ್ತು ಶ್ರೀಲಂಕಾ (2017) ವಿರುದ್ಧ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದು, ಈ ಪಟ್ಟಿಯಲ್ಲಿ ಬೇರೆ ಯಾವ ಭಾರತೀಯರೂ ಇಲ್ಲ ಎನ್ನಲಾಗಿದೆ.  –


Share to all

You May Also Like

More From Author