ವಾಹನ ಸವಾರರ ಗಮನಕ್ಕೆ: ಈ ದಿನಾಂಕದಲ್ಲಿ HSRP ನಂಬರ್ ಪ್ಲೇಟ್ ಅಳವಡಿಸೋದು ಕಡ್ಡಾಯ! ಮಿಸ್ ಆದ್ರೆ ಕ್ರಮ ಫಿಕ್ಸ್!?

Share to all

ಬೆಂಗಳೂರು:- ವಾಹನ ಸವಾರರೇ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಈ ಕೆಲಸ ಮಾಡದಿದ್ರೆ ಕ್ರಮ ಫಿಕ್ಸ್ ಎನ್ನಲಾಗಿದೆ. ಹೆಚ್ಎಸ್ಆರ್​​ಪಿ ನಂಬರ್ ಪ್ಲೇಟ್ ಅಳವಡಿಸಲು ಈಗಾಗಲೇ ರಾಜ್ಯ ‌ಸರ್ಕಾರ ಮೂರ್ನಾಲ್ಕು ಬಾರಿ ಬಾರಿ ಗಡುವು ವಿಸ್ತರಣೆ ಮಾಡಿದೆ. ಬರೋಬ್ಬರಿ 4 ಬಾರಿ ಸಮಯ ವಿಸ್ತರಿಸಿದರೂ ಸಹ ವಾಹನ ಮಾಲೀಕರು ತಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಿದೆ.

ಹೆಚ್ಎಸ್ಆರ್​​ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸರ್ಕಾರ ನವೆಂಬರ್ 30ರ ವರೆಗೆ ಮತ್ತೊಮ್ಮೆ ಗಡುವು ನೀಡಿದೆ. ಈ ದಿನಾಂಕದ ಒಳಗೆ ಮಾಲೀಕರು ತಮ್ಮ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕು. ಒಂದು ವೇಳೆ ಈ ದಿನಾಂಕದ ಒಳಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೇ ಮುಂದಿನ ತಿಂಗಳು ಅಂದರೆ ಡಿಸೆಂಬರ್ 1 ರಿಂದ ದಂಡ ವಿಧಿಸಲಾಗುತ್ತದೆ.

1.90 ಕೋಟಿ ಹಳೆ ವಾಹನಗಳಲ್ಲಿ ಕೇವಲ 55 ಲಕ್ಷ ವಾಹನಗಳಿಗೆ ಮಾತ್ರ ಈ ನಂಬರ್ ಪ್ಲೇಟ್ ಅನ್ನು ಅಳವಡಿಸಲಾಗಿದೆ. ಇನ್ನುಳಿದವರು ಈ ನಂಬರ್ ಪ್ಲೇಟ್​ ಅನ್ನು ಹಾಕಿಸಿಲ್ಲ. ಹೀಗಾಗಿ ಸರ್ಕಾರ ವಾಹನಗಳ ಮಾಲೀಕರಿಗೆ ಮತ್ತೊಂದು ಅವಕಾಶ ಕೊಟ್ಟಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಲ್ಲದಿದ್ದರೇ ಸರ್ಕಾರಕ್ಕೆ ದಂಡ ಕಟ್ಟಬೇಕಾಗುತ್ತದೆ.

ಹೆಚ್ಎಸ್ಆರ್​​ಪಿ ನಂಬರ್ ಪ್ಲೇಟ್ ವಾಹನಗಳಿಗೆ ಅಳವಡಿಸಿದರೆ, ಓನರ್​ಶಿಪ್ ಬದಲಾವಣೆ, ನಕಲಿ ಆರ್‌ಸಿ, ನಕಲಿ ವಿಮೆ, ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ಕೆಲಸ ಸುಲಭವಾಗಿ ಮಾಡಬಹುದು. ಇದರ ಜೊತೆಗೆ ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಈ ನಂಬರ್​ ಪ್ಲೇಟ್​ ಸಹಾಯಕ ಆಗುತ್ತದೆ.


Share to all

You May Also Like

More From Author