IPL 2025: RCB ಪಯಣ ಮುಗಿದಿಲ್ಲ: ತಂಡದಲ್ಲೇ ಉಳಿಯೋ ಸುಳಿವು ಕೊಟ್ಟ ಗ್ಲೆನ್ ಮ್ಯಾಕ್ಸ್ ವೆಲ್!

Share to all

IPL ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದ್ದು, ಹೀಗಾಗಿ ಎಲ್ಲಾ ಪ್ರಾಂಚೈಲಿಗಳು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ. ಹೀಗಾಗಲೇ RCB ಮೂವರು ಆಟಗಾರನ್ನು ಉಳಿಸಿಕೊಂಡು ಸ್ಟಾರ್ ಆಟಗಾರರಿಗೆ ಕೊಕ್ ಕೊಟ್ಟಿದೆ. ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ರೀಟೈನ್​ ಲಿಸ್ಟ್​​ ರಿಲೀಸ್​ ಮಾಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ.

ಆರ್​​ಸಿಬಿ ತಂಡ ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್​​ ಗ್ಲೆನ್​ ಮ್ಯಾಕ್ಸ್​ವೆಲ್​​ ಗೇಟ್​ಪಾಸ್​​ ನೀಡಿದೆ. ಈ ಬಗ್ಗೆ ಮ್ಯಾಕ್ಸಿ ಮಾತಾಡಿದ್ದಾರೆ

ಆರ್​​ಸಿಬಿಯಿಂದ ನನ್ನ ಕೈ ಬಿಡುವ ಬಗ್ಗೆ ಹೆಡ್​ ಕೋಚ್​​ ಆ್ಯಂಡಿ ಫ್ಲವರ್​ ಮತ್ತು ಡೈರೆಕ್ಟರ್​​​ ಬೊಂಬಾಟ್​ ಮಾಹಿತಿ ನೀಡಿದ್ರು. ಏನಕ್ಕೆ ರೀಟೈನ್​ ಮಾಡಿಕೊಳ್ಳುತ್ತಿಲ್ಲ ಅನ್ನೋದು ಬಿಡಿಸಿ ಹೇಳಿದ್ರು. ಆರ್​​ಸಿಬಿ ಜತೆಗೆ ನನ್ನ ಜರ್ನಿ ಅದ್ಭುತವಾಗಿತ್ತು. ನನ್ನ ಮತ್ತು ಆರ್​ಸಿಬಿ ಜರ್ನಿ ಮುಗಿದಿದೆ ಎಂದು ನಾನು ಹೇಳಲ್ಲ ಎಂದರು ಮ್ಯಾಕ್ಸ್​ವೆಲ್​​.

ಇನ್ನು, ಮುಂದಿನ ಸೀಸನ್​ಗಾಗಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಉತ್ತಮ ಪ್ರದರ್ಶನ ನೀಡದ ದುಬಾರಿ ಆಟಗಾರರನ್ನೇ ಕೈ ಬಿಟ್ಟಿದೆ. ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರನ್ನು ಆರ್​​ಸಿಬಿ ರಿಲೀಸ್​ ಮಾಡಿದೆ. 2021ರ ಹರಾಜಿನಲ್ಲಿ ಮ್ಯಾಕ್ಸ್‌ವೆಲ್‌ ಅವರನ್ನು 14.25 ಕೋಟಿ ರೂಪಾಯಿ ನೀಡಿ ಆರ್​​ಸಿಬಿ ಖರೀದಿ ಮಾಡಿತ್ತು. 2023ರ ಐಪಿಎಲ್‌ನಲ್ಲಿ 400 ರನ್ ಗಳಿಸಿದ್ದ ಮ್ಯಾಕ್ಸಿ ಕಳೆದ ಸೀಸನ್​ 2024ರ ಐಪಿಎಲ್‌ನಲ್ಲಿ ಕೇವಲ 52 ರನ್​ ಗಳಸಿದರು. ಈ ಮೂಲಕ ಆರ್​ಸಿಬಿಗೆ ಮ್ಯಾಕ್ಸ್​ವೆಲ್​ ದೊಡ್ಡ ತಲೆನೋವಾಗಿ ಪರಿಣಮಿಸಿದ್ರು.


Share to all

You May Also Like

More From Author