ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಆಡಿಯೋಗಳನ್ನು ಸಾರ್ವಜನಿಕಗೊಳಿಸುವ ಕೆಲಸ ಶುರುವಾಗಿದೆ. ಕಾಂಗ್ರೆಸ್ ಭದ್ರಕೋಟೆಯನ್ನ ಛಿದ್ರ ಮಾಡಿ ಮೊದಲ ಬಾರಿಗೆ ಖಾತೆ ತೆರೆಯಲು ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗಿದ್ದಾರೆ. ಅದರಂತೆ ತಮ್ಮ ವಿರುದ್ದ ಆಡಿಯೋ ಬಿಡುಗಡೆ ಮಾಡಿದ ಡಿ.ಕೆ ಸುರೇಶ್ ಗೆ ತಿರುಗೇಟು ಕೊಟ್ಟ ಹೆಚ್ ಡಿ ಕುಮಾರಸ್ವಾಮಿ,
ಸಿ.ಪಿ.ಯೋಗೇಶ್ವರ್ ಯಾರಿಗೆಲ್ಲಾ ಟೋಪಿ ಹಾಕಿದ್ದಾರೆ ಗೊತ್ತು, ಬಿಡದಿಗೆ ಹೋಗಿ ಕೇಳಿದ್ರೆ ಎಲ್ಲಾ ಗೊತ್ತಾಗುತ್ತೆ. ಹಾದಿ ಬೀದಿಯಲ್ಲಿ ಜನರೇ ಯೋಗೇಶ್ವರ್ ಬಗ್ಗೆ ಮಾತನಾಡ್ತಾರೆ, ಮೆಗಾ ಸಿಟಿ ಹೆಸರಲ್ಲಿ ಯೋಗೇಶ್ವರ್ ಟೋಪಿ ಹಾಕಿದ್ದಾನೆ ಎಂದು ಡಿಕೆ ಸುರೇಶ್ ಹೇಳಿರುವ ಆಡಿಯೋವನ್ನು ಕುಮಾರಸ್ವಾಮಿ ಅವರು ಚನ್ನಪಟ್ಟಣ ಪ್ರಚಾರ ವೇಳೆ ಆಡಿಯೋ ರಿಲೀಸ್ ಮಾಡಿದ್ದಾರೆ.
ಸದ್ಯ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಕುರಿತಾಗಿ ಮಾಜಿ ಸಂಸದ ಡಿಕೆ ಸುರೇಶ್ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಒಂದನ್ನು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಈ ಆಡಿಯೋ ಇದೀಗ ವೈರಲ್ ಆಗುತ್ತಿದೆ.