ಚಿತ್ರದುರ್ಗ:- ಆಸ್ಪತ್ರೆಯ ಶವಗಾರದಲ್ಲಿ ಸತ್ತು ಮಲಗಿರುವ ಈ ಪುಟಾಣಿ ಹೆಸರು ಮಂಜುನಾಥ್. ಚಿತ್ರದುರ್ಗ ಜಿಲ್ಲೆಯ ಹಳೆ ರಂಗಾಪುರ ಗ್ರಾಮದ ಶಿವು ಹಾಗೂ ಗೌರಮ್ಮ ದಂಪತಿಗಳ ಪುತ್ರ. 6 ವರ್ಷದ ಬಾಲಕನಾಗಿದ್ದ ಮಂಜುನಾಥ್ ಆಟ – ಪಾಠದಲ್ಲೂ ಕೂಡಾ ಚುರುಕಾಗಿದ್ದ. ಆದರೆ ನಿನ್ನೆ ಮನೆಯಲ್ಲಿ ತಾಯಿ ಇಲ್ಲದ ಕಾರಣಕ್ಕೆ ಈಡೀ ದಿನ ಬಾಲಕ ಊಟ ಇಲ್ಲದೆ ಹಸಿವಿನಿಂದ ಬಳಲಿದ್ದ.
ಮನೆಯಲ್ಲಿದ್ದ ಸ್ವಂತ ತಂದೆಯ ಬಳಿ ಪುತ್ರ ಮಂಜುನಾಥ್ ಊಟಕ್ಕಾಗಿ ಅಂಗಲಾಚಿದ್ದ. ಆದರೆ ಈ ಕ್ರೂರಿ ತಿಪ್ಪೇಶ್, ತನ್ನ ಮಗ ಅನ್ನಕ್ಕಾಗಿ ಬೇಡಿದ್ದೆ ತಡ, ಮಗನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಪುತ್ರ ಮಂಜುನಾಥ್ ಎದೆ ಹಾಗೂ ಸೊಂಟದ ಭಾಗಕ್ಕೆ ಗುದ್ದಿ ಬಿಟ್ಟಿದ್ದ. ತಂದೆ ಗುದ್ದಿದ್ದೇ ತಡ, ಸ್ಥಳದಲ್ಲೇ ಪುತ್ರ ಮಂಜುನಾಥ್ ಮೂರ್ಛೆ ಹೋಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದ ತಾಯಿ ಗೌರಮ್ಮ ಮಂಜುನಾಥ್ ನನ್ನ ಸಿರಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆಯ್ದೋದಿದ್ದಳು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಕರೆತಂದಿದ್ದಳು. ಆದರೆ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯದಲ್ಲೇ ಪುಟಾಣಿ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಕುರಿತು ವೈಧ್ಯರು ಹೇಳುತ್ತಿದ್ದಂತೆ, ಆಸ್ಪತ್ರೆ ಬಳಿ ಅಮ್ಮನ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನೂ ಬಾಲಕ ಮಂಜುನಾಥ್ ತಂದೆ ತಿಪ್ಪೇಶ್ ಹಾಗೂ ತಾಯಿ ಗೌರಮ್ಮ ಅಂತರ್ಜಾತಿ ಪ್ರೇಮ ವಿವಾಹವಾಗಿದ್ದರು. ಆಸ್ತಿಯಲ್ಲೂ ಮಗನಿಗೆ ಪಾಲು ಕೊಡಬೇಕು ಎಂಬ ದ್ವೇಷಕ್ಕೆ ಆರೋಪಿ ತಿಪ್ಪೇಶ್ ಕೊಂದಿದ್ದಾನೆ ಎಂದು ಪತ್ನಿ ಗೌರಮ್ಮ ಆರೋಪಿಸಿದ್ದಾಳೆ. ಇನ್ನೂ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿ ತಿಪ್ಪೇಶ್ ಹಾಗೂ ಆತನ ತಾಯಿ ಶೆಟ್ಟಮ್ಮ ಅವರನ್ನ ಬಂಧಿಸಿದ್ದು, ತನಿಖೆ ಕೂಡಾ ಆರಂಭಿಸಿದ್ದಾರೆ. ಒಟ್ನಲ್ಲಿ ಮಕ್ಕಳಿಗಾಗಿ ಜನರು ಆಸ್ತಿ- ಪಾಸ್ತಿ ಮಾಡ್ತಿರೋ ಈ ಕಾಲದಲ್ಲಿ, ತುತ್ತು ಅನ್ನಕ್ಕಾಗಿ ಹೆತ್ತ ಮಗನನ್ನ ತಂದೆ ಕೊಂದಿದ್ದು ವಿಪರ್ಯಾಸ.