ನನ್ನ ಜೀವ ಇರೋವರೆಗೂ ದರ್ಶನ್ ನನ್ನ ಮಗನೇ, ಅದು ಎಂದಿಗೂ ಬದಲಾಗಲ್ಲ: ಸುಮಲತಾ ಅಂಬರೀಷ್

Share to all

ಮಂಡ್ಯ: ತಾಯಿ ಸ್ಥಾನದಲ್ಲಿ ನಾನು ಯಾವಾಗಲೂ ದರ್ಶನ್ ಪರವಾಗಿ ಇದ್ದೇನೆ, ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ ಎಂದು ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆನ್ನು ನೋವು ತುಂಬಾ ಇದೆ. ಆದರೆ ಸರ್ಜರಿ ಅವರಿಗೆ ಇಷ್ಟ ಇಲ್ಲ ಅಂತ ನಾನು ಕೇಳ್ಪಟ್ಟೆ. ಯಾಕೆಂದರೆ, ಸರ್ಜರಿ ಮಾಡಿದರೆ ರಿಕವರಿ ಸಮಯ ತುಂಬ ಇರುತ್ತೆ. ಶೂಟಿಂಗ್ ಅರ್ಧಕ್ಕೆ ನಿಂತಿದೆ.

ಇದು ಸಿನಿಮಾ ಇಂಡಸ್ಟ್ರಿ ನಷ್ಟ ಎದುರಿಸುತ್ತಿರುವ ಸಂದರ್ಭ. ಹೆಚ್ಚಿನ ಮಾಹಿತಿ ಇಲ್ಲ. ದರ್ಶನ್ ಕೈಯಲ್ಲಿ ಫೋನ್ ಇಲ್ಲ. ಅವರ ಪತ್ನಿ ಜೊತೆ ನಾವು ಸಂಪರ್ಕ ಮಾಡಬೇಕು ಅಷ್ಟೇ’ ಎಂದು ಸುಮಲತಾ ಅಂಬರೀಷ್ ಅವರು ಹೇಳಿದ್ದಾರೆ. ಇನ್ನೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ನಾನು ಸಂಪರ್ಕದಲ್ಲಿ ಇದ್ದೇನೆ.

ದರ್ಶನ್​ಗೆ ಚಿಕಿತ್ಸೆ ನಡೆಯುತ್ತಿದೆ. ಮೊದಲು ಅವರು ವಿಶ್ರಾಂತಿ ಪಡೆದುಕೊಂಡು ಆರೋಗ್ಯ ಸರಿಪಡಿಸಿಕೊಳ್ಳಲಿ. ಕಾನೂನಿನ ಸವಾಲು ಎದುರಿಸಿ ಅವರು ಹೊರಬರಬೇಕು ಅಂತ ಆಸೆ ಇಟ್ಟುಕೊಂಡಿದ್ದೇವೆ. ನಮ್ಮ ಸಂಬಂಧ ಹಾಗೆಯೇ ಉಳಿಯುತ್ತದೆ. ನನ್ನ ಲೈಫ್ ಇರುವವರೆಗೂ ದರ್ಶನ್ ನನ್ನ ಮಗನೇ. ನಿಜಾಂಶ ಏನು ಎಂಬುದು ಹೊರಗೆ ಬರಬೇಕು. ದರ್ಶನ್​ಗೆ ಒಳ್ಳೆಯದಾಗಬೇಕು. ಅವರು ನಿರಪರಾಧಿ ಅಂತ ಸಾಬೀತಾಗಬೇಕು ಎಂಬುದು ನನ್ನ ಆಸೆ’ ಎಂದು ಸುಮಲತಾ ಅಂಬರೀಷ್ ಅವರು ಹೇಳಿದ್ದಾರೆ.


Share to all

You May Also Like

More From Author