ಪಿಪಿಇ ಕಿಟ್ ಖರೀದಿಯಲ್ಲಿ ಬೃಹತ್ ಭ್ರಷ್ಟಾಚಾರ! ಬಿಎಸ್ವೈ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್’ಗೆ ಶಿಫಾರಸು

Share to all

ಬೆಂಗಳೂರು:– ಮುಡಾ ಹಗರಣ ಇಟ್ಟುಕೊಂಡು ರಾಜ್ಯ ಸರ್ಕಾರದ ಕೆಡವಲು ತಯಾರಿ ನಡೆಸಿದ್ದ ಬಿಜೆಪಿಗೆ ಸಿದ್ದರಾಮಯ್ಯ ಸರ್ಕಾರ ಕೊರೊನಾ ಅಸ್ತ್ರ ಹೂಡಿದೆ. ಬಿಜೆಪಿ ಅವಧಿಯಲ್ಲಿ ಕೊರೊನಾ ಹಗರಣಕ್ಕೆ ಸಂಬಂಧಿಸಿದಂತೆ ಪಿಪಿಇ ಕಿಟ್​ ಹಾಗೂ ಇತರೆ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿದೆ ಎಂದು ನ್ಯಾಯಮೂರ್ತಿ ಜಾನ್​ ಮೂಕಲ್​ ಡಿ.ಮೈಕಲ್​ ಕುನ್ಹಾ ಆಯೋಗ ಹೇಳಿದೆ. ಈ ಸಂಬಂಧ ಅಂದಿನ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಆಯೋಗ ಶಿಫಾರಸು ಮಾಡಿದೆ.

ಅಂದಿನ ಸರ್ಕಾರ ಚೀನಾ ಕಂಪನಿಗಳಿಂದ ಪಿಪಿಇ ಕಿಟ್ ಖರೀದಿ ಮಾಡಿತ್ತು. ಪಿಪಿಇ ಕಿಟ್ ಖರೀದಿ ವೇಳೆ ದರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ದರ ವ್ಯತ್ಯಾಸದಿಂದ ಪಿಪಿಇ ಕಿಟ್ ಪೂರೈಕೆದಾರರಿಗೆ 14.21 ಕೋಟಿ ರೂ. ಲಾಭವಾಗಿದೆ. ಪೂರೈಕೆದಾರರಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಅಕ್ರಮ ಎಸಗಲಾಗಿದೆ ಎನ್ನಲಾಗಿದೆ.

ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಜಾನ್​ ಮೈಕಲ್​​​ ಡಿ.ಕುನ್ಹಾ ನೇತೃತ್ವದಲ್ಲಿ ಆಗಸ್ಟ್ 25, 2023ರಲ್ಲಿ‌ ರಚನೆಯಾಗಿದ್ದ ತನಿಖಾ ಆಯೋಗ ಈಗಾಗಲೇ ಮಧ್ಯಂತರ ವರದಿ ಸಲ್ಲಿಸಿದೆ. ಒಟ್ಟು 769 ಕೋಟಿ ರೂ. ಅವ್ಯವಹಾರ ನಡೆದಿರುವುದು ಪತ್ತೆ ಮಾಡಿದೆ. ಚೀನಾದ ಸಂಸ್ಥೆಗಳಿಂದ 3 ಲಕ್ಷ ಪಿಪಿಇ ಕಿಟ್​ಗಳನ್ನು ನೇರವಾಗಿ ಖರೀದಿಸುವ ಕುರಿತು ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆದೇಶಿಸಿದ್ದರು. ಎರಡು ಚೀನಾ ಸಂಸ್ಥೆಗಳಿಂದ ಪಿಪಿಇ ಕೆಟ್​ಗಳನ್ನು ದುಬಾರಿ ದರದಲ್ಲಿ ಕೊಂಡುಕೊಳ್ಳಲಾಗಿದೆ ಎಂದು ಬಯಲಾಗಿದೆ


Share to all

You May Also Like

More From Author