Ind vs SA: ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಸ್ಟಾರ್ ಬ್ಯಾಟರ್ ಸ್ಯಾಮ್ಸನ್!

Share to all

ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿಶ್ವ ದಾಖಲೆ ಬರೆದಿದ್ದಾರೆ. ದಕ್ಷಿಣ ಆಫ್ರಿಕಾದ ಡರ್ಬನ್​ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 61 ರನ್​ಗಳ ಭರ್ಜರಿ ಜಯ ದಾಖಲಿಸಿದೆ. ತವರಿನಲ್ಲೇ ಹರಿಣ ಪಡೆಯ ಬೌಲರ್​​ಗಳ ಬೆಂಡೆತ್ತಿದ ಭಾರತೀಯ ಯುವ ಬ್ಯಾಟರ್​ಗಳು 4 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಗೆದ್ದು ಬೀಗಿದ್ದಾರೆ.

ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ್ದ ಸ್ಯಾಮ್ಸನ್, ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಮ್ಮೆ ಅದೇ ಸಾಧನೆ ಮಾಡಿದರು. ಉತ್ತಮ ಫಾರ್ಮ್​ನಲ್ಲಿರುವ ಸ್ಯಾಮ್ಸನ್​, ಸ್ಫೋಟಕ ಇನ್ನಿಂಗ್ಸ್​ ಆಡಿದ್ರು.

ತನ್ನ ಆರಂಭಿಕ ಜೊತೆಗಾರ ಅಭಿಷೇಕ್ ಶರ್ಮಾ ಬೇಗನೆ ಪೆವಿಲಿಯನ್ಸ್​ ಸೇರಿಕೊಂಡ ನಂತರವೂ ಸಂಜು ಸ್ಯಾಮ್ಸನ್​ ಪವರ್‌ಪ್ಲೇ ಅನ್ನು ಸಂಪೂರ್ಣವಾಗಿ ಬಳಸಿಕೊಂಡು 20 ಎಸೆತಗಳಲ್ಲಿ 35 ರನ್ ಗಳಿಸಿದರು. ಪವರ್‌ಪ್ಲೇ ನಂತರವೂ ದಕ್ಷಿಣ ಆಫ್ರಿಕಾದ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ರು.

ಸ್ಯಾಮ್ಸನ್ 47 ಎಸೆತಗಳಲ್ಲಿ ಶತಕದ ಮೈಲಿಗಲ್ಲನ್ನು ತಲುಪಿದ್ರು. ಒಟ್ಟು 50 ಎಸೆತಗಳಲ್ಲಿ ಏಳು ಬೌಂಡರಿಗಳು ಮತ್ತು 10 ಸಿಕ್ಸರ್‌ಗಳ ಸಹಿತ 107 ರನ್​ಗಳಿಸಿ ಪೆವಿಲಿಯನ್ ಸೇರಿದ್ರು. ಈ ಶತಕದ ಮೂಲಕ ಟಿ20 ಕ್ರಿಕೆಟ್​ನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ಶತಕ ಸಿಡಿಸಿದ ಭಾರತದ 4ನೇ ಬ್ಯಾಟರ್​ ಎನಿಸಿಕೊಂಡರು.


Share to all

You May Also Like

More From Author