ವ್ಯಾಪಾರಿ ವಿಜಯ ಅಳಗುಂಡಗಿ
ಪ್ಲಾಸ್ಟಿಕ್ ವ್ಯಾಪಾರಿಗಳಿಂದ ಲಕ್ಷ ಲಕ್ಷ ವಸೂಲಿ.ಮಂಜುನಾಥ ಲೂತಿಮಠ ಆರೋಪ.
ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಅವ್ಯಾಹತವಾಗಿ ಮಾರಾಟವಾಗತಿದೆ.ಅದನ್ನು ನಿಯಂತ್ರಿಸಲು ಕರವೇ ಸಂಘಟನೆಯಿಂದ ನಿಷೇಧಿತ ಪ್ಲಾಸ್ಟಿಕ್ ಬಂದ್ ಅಭಿಯಾನ ಆರಂಭ ಮಾಡಿದ್ದೇವೆ.
ಈ ನಮ್ಮ ಅಭಿಯಾನ ಆರಂಭದಿಂದ ಗಲಿಬಿಲಿಗೊಂಡಿರುವ ಕೆಲವು ರಾಜಕಾರಿಣಿಗಳು ಹಾಗೂ ವ್ಯಾಪಾರಸ್ಥರು ವಿಜಯ ಅಳಗುಂಡಗಿ ಕಡೆಯಿಂದ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ.
ವಿಜಯ ಅಳಗುಂಡಗಿ ಹುಬ್ಬಳ್ಳಿಯಲ್ಲಿರುವ ನಿಷೇಧಿತ ಪ್ಲಾಸ್ಟಿಕ್ ಅಂಗಡಿಕಾರರಿಂದ ಪ್ರತಿ ತಿಂಗಳು ಒಂದು ಅಂಗಡಿಯಿಂದ 10 ರಿಂದ 25 ಸಾವಿರ ಕಲೆಕ್ಷನ್ ಮಾಡತಾನೆ.ಸುಮಾರು ಮೂವತ್ತಕ್ಕೂ ಹೆಚ್ಚು ಪ್ಲಾಸ್ಟಿಕ್ ಅಂಗಡಿಗಳಿವೆ.ಅವನು ಕಲೆಕ್ಷನ್ ಮಾಡಿದ ದುಡ್ಡನ ಯಾರಿಗೆ ಕೊಡತಾನೆ ಹೇಳಬೇಕು ಎಂದು ಮಂಜುನಾಥ ಲೂತಿಮಠ ಪ್ರಶ್ನಿಸಿದ್ದಾರೆ.
ಅಲ್ಲದೇ ಈ ನಿಷೇಧಿತ ಪ್ಲಾಸ್ಟಿಕ್ ದಂಧೆಯ ಹಿಂದೆ ಹಲವರ ಕೈಗಳು ಕೆಲಸ ಮಾಡತಿವೆ.ಅದಕ್ಕೆ ನಮ್ಮ ಹೋರಾಟ ಹತ್ತಿಕ್ಕುವ ಸಲುವಾಗಿ ಇಂತಹ ಕಂಪ್ಲೇಟ್ ಗಳನ್ನ ಮಾಡಿದ್ದಾರೆ.ಆ ಯಾವುದೇ ಬೆದರಿಕೆಗೂ ನಾನು ಬಗ್ಗುವುದಿಲ್ಲಾ ನನ್ನ ಹೋರಾಟ ನಿಷೇಧಿತ ಪ್ಲಾಸ್ಟಿಕ್ ಮುಕ್ತ ಹುಬ್ಬಳ್ಳಿಯಾಗಬೇಕು ಅನ್ನೋದೆ ನನ್ನ ಗುರಿ ಎಂದು ಹೇಳಿದ್ದಾರೆ.
ಅಲ್ಲದೇ ನನ್ನ ವಿರುದ್ಧ ಪಿತೂರಿ ಮಾಡುವವರನ್ನು ನಾನು ಸುಮ್ನೆ ಬಿಡಲ್ಲಾ ನೋಡತಾ ಇರಿ ಎಂದು ಲೂತಿಮಠ ಉದಯ ವಾರ್ತೆ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ