ಸರಕಾರದ ಆದೇಶ ಪಾಲಿಕೆಯ ಕಸದ ಬುಟ್ಟಿಗೆ..ಡೆಪಿಟೇಶನ್ ಅವದಿ ಮುಗಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ರಿಲೀವ್ ಮಾಡತಾ ಇಲ್ಲಾ ಕಮೀಷನರ್ ಸಾಹೇಬ್ರು.ಡಿಸಿ ಮೇಡಂ ಏನ್ರೀ ಇದು ಆಡಳಿತ..
ಹುಬ್ಬಳ್ಳಿ:- ರಾಜ್ಯದ ಹತ್ತೂ ಮಹಾನಗರ ಪಾಲಿಕೆಗಳಲ್ಲಿ ನಿಯೋಜನೆ ಮೇಲೆ ಬೇರೇ ಬೇರೆ ಇಲಾಖೆಗಳಿಂದ ಬಂದ ಅವಧಿ ಮೀರಿದಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅವರ ಮಾತೃ ಇಲಾಖೆಗೆ ಕೂಡಲೆ ಹಿಂದಿರುಗಿಸಬೇಕೆಂದು ನಗರಾಭಿವೃದ್ಧಿ ಇಲಾಖೆ ಕಳೆದ ತಿಂಗಳು 15 ರಂದು ಎಲ್ಲಾ ಮಹಾನಗರ ಪಾಲಿಕೆಗಳಿಗೆ ಆದೇಶ ಮಾಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೊಂದನ್ನು ಬಿಟ್ಟು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು ಸರಕಾರದ ಆದೇಶ ಆದ ಮೇಲೆ ಸರಕಾರದ ಆದೇಶದ ಅನ್ವಯ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅವಧಿ ಮೀರಿದವರನ್ನು ಮಾತೃ ಇಲಾಖೆಗೆ ಹಿಂದಿರುಗಿಸಿದ್ದಾರೆ.