ಸಿದ್ದರಾಮಯ್ಯ ಮೀಸಲಾತಿ ಕೊಡಲ್ಲ, ಅವನೊಬ್ಬ ಲಫಂಗ ಇದ್ದಾನೆ: ಏಕವಚನದಲ್ಲೇ ಸಿಎಂ ವಿರುದ್ಧ ಅಭಿನವ ಸಂಗನಬಸವ ಶ್ರೀ ಕಿಡಿ!

Share to all

ವಿಜಯಪುರ:-ಸಿದ್ದರಾಮಯ್ಯ ಮೀಸಲಾತಿ ಕೊಡಲ್ಲ, ಅವನೊಬ್ಬ ಲಫಂಗ ಇದ್ದಾನೆ ಎಂದು ಹೇಳುವ ಮೂಲಕ ಏಕವಚನದಲ್ಲೇ ಸಿಎಂ ವಿರುದ್ಧ ಅಭಿನವ ಸಂಗನಬಸವ ಶ್ರೀ ಕಿಡಿಕಾರಿದ್ದಾರೆ.

ಕಿತ್ತೂರ ರಾಣಿ ಚೆನ್ನಮ್ಮನ 246ನೇ ಜಯಂತಿ ಕಾರ್ಯಕ್ರಮದಲ್ಲಿ ಹಾಗೂ 200ನೇ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಸಿಎಂ ಸಿದ್ದರಾಮಯ್ಯ ಲಫಂಗ ಇದ್ದಾನೆ, ಮೀಸಲಾತಿ ನೀಡಲ್ಲ ಎಂದು ಕೂಲಡಸಂಗಮ ಶ್ರೀಗಳಿಗೆ ನಾನು ಹೇಳಿದ್ದೆ ಎಂದು ಸಿಎಂ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ.

ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೂಡಲಸಂಗಮ ಜಯಮೃತ್ಯುಂಜಯ ಶ್ರೀಗಳ ಹೆಗಲ ಮೇಲೆ ಸಿದ್ದರಾಮಯ್ಯ ಕೈ ಹಾಕ್ತಾನೆ. ನಾನೇ ಆಗಿದ್ರೇ ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ. ಸಿಎಂ ಆದಾಗ ಗದ್ದಲ ಮಾಡ್ತಾರೆ. ಪಂಚಮಸಾಲಿ 2ಎ ಮೀಸಲಾತಿಯಲ್ಲಿ ನಾಟಕ ಮಾಡಿಕೊಂಡು ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಮೀಸಲಾತಿ ನೀಡಲ್ಲ ಎಂದು ಕಿಡಿಕಾರಿದ್ದಾರೆ.

ಬೇರೆ ಯಾರಾದ್ರೂ ಸಿಎಂ ಆದಾಗ ಪಂಚಮಸಾಲಿ 2ಎ ಮೀಸಲಾತಿ ಸಿಗಬಹುದು. ಆದರೆ ಈಗ ಮಾತ್ರ ಸಿಗುವುದಿಲ್ಲ ಎಂದಿದ್ದಾರೆ.


Share to all

You May Also Like

More From Author