ಬೆಂಗಳೂರು:– ವಕ್ಪ್ ಆಸ್ತಿ ವಿವಾದದ ಕುರಿತು ಯತ್ನಾಳ್ ಟೀಮ್ ನಿಂದ ಪ್ರತ್ಯೇಕ ಹೋರಾಟ ವಿಚಾರವಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ವಕ್ಪ್ ಬಗ್ಗೆ ಎರಡು ಹಂತಗಳಲ್ಲಿ ಹೋರಾಟ ನಡೆಸುವ ಬಗ್ಗೆ ತೀರ್ಮಾನ ಆಗಿದೆ. ಅಧಿವೇಶನ ಪ್ರಾರಂಭ ಆಗುವ ದಿನ ಬೆಳಗಾವಿ ಯಲ್ಲಿ ರೈತರ ಸೇರಿಸಿ ಬೃಹತ್ ಪ್ರತಿಭಟನೆ ಮಾಡುತ್ತೇವೆ. ಒಟ್ಟಾರೆಯಾಗಿ ಪಕ್ಷದ ನಿರ್ಧಾರ ಮಾಡಿದೆ, ನಿಶ್ಚಯ ಮಾಡಿದ್ದೇವೆ.
ಎರಡು ಹಂತಗಳ ಹೋರಾಟಕ್ಕೆ ಮೂರು ತಂಡಗಳು ಕೂಡ ರಚನೆ ಯಾಗಿದೆ. ಇವತ್ತು ಅಥವಾ ನಾಳೆ ನಮ್ಮ ಮುಖಂಡರು ಅದರ ಬಗ್ಗೆ ತಿಳಿಸ್ತಾರೆ. ರೈತರು ಪರವಾದ ಹೋರಾಟ ಮಾಡಿದಾಗ ಮುಜಗರ ಯಾಕೆ ಪಟ್ಕೊಬೇಕು..? ರೈತರು ಪರವಾಗಿ ಯಾರ ಬೇಕಾದರೂ ಹೋರಾಟ ಮಾಡಬಹುದು ಅದಕ್ಕೆ ನಮ್ಮದೇನು ತಕರಾರು ಇಲ್ಲ. ಯತ್ನಾಳ್ ಟೀಮ್ ನ ಹೋರಾಟಕ್ಕೆ ತಮ್ಮ ಒಪ್ಪಿಗೆ ಇದೆಯಾ ಎಂಬ ಪ್ರಶ್ನೆಗೆ ನಾವು ಎರಡು ಹಂತ ಗಳಲ್ಲಿ ಹೋರಾಟದ ಬಗ್ಗೆ ತೀರ್ಮಾನ ಮಾಡಿದ್ದೇವೆ. ಹೋರಾಟದ ಬಗ್ಗೆ ಗಟ್ಟಿಯಾಗಿ ತಗೊಳ್ತೇವೆ ಎಂದರು.
ನಿಮ್ಮ ತಂಡದಲ್ಲಿ ಯತ್ನಾಳ್, ರಮೇಶ್ ಇರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ಯತ್ನಾಳ್ ನಮ್ಮ ಪಕ್ಷದವರೇ ತಾನೇ. ಎಲ್ಲಾ ಶಾಸಕರು ಇರ್ತಾರೆ, ಹಿರಿಯರು ಇರ್ತಾರೆ. ರಾಜ್ಯದಲ್ಲಿ ರೈತರ ಪರವಾಗಿ ಯಾರು ಹೋರಾಟ ಮಾಡಿದ್ರು, ಅದಕ್ಕೆ ನಮ್ಮ ಬೆಂಬಲ ಇದೆ. ರೈತರ ವಿಷಯದಲ್ಲಿ ಬಿಜೆಪಿ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ. ಈಗಾಗಲೇ ಹಿರಿಯ ತಂಡ ರಚನೆ ಆಗಿದೆ. ಇದರ ಬಗ್ಗೆ ಶೀಘ್ರದಲ್ಲೇ ತಿಳಿಸುತ್ತೇವೆ ಎಂದ ವಿಜಯೇಂದ್ರ ಹೇಳಿದ್ದಾರೆ.