ಉತ್ತರ ಕರ್ನಾಟಕದ ಬಿಜೆಪಿಯ ಮತ್ತೊಂದು ವಿಕೆಟ್ ಪತನ.ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕ

Share to all

ಉತ್ತರ ಕರ್ನಾಟಕದ ಬಿಜೆಪಿಯ ಮತ್ತೊಂದು ವಿಕೆಟ್ ಪತನ.ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕ.

ಹುಬ್ಬಳ್ಳಿ:-ಕಳೆದ ಐದು ವಿಧಾನಸಭಾ ಚುನಾವಣೆ ಎದುರಿಸಿದ ಹಿರಿಯ ಬಿಜೆಪಿಯ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ ನೇತ್ರತ್ವದಲ್ಲಿ ಬೆಂಗಳೂರಿನಲ್ಲಿ ಸಿಎಂ ಜಗದೀಶ.ಶೆಟ್ಟರ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಸೇರಿದ್ದಾರೆ ಎನ್ನಲಾಗಿದೆ.ಈ ಹಿಂದೆಯೇ ನಾನು ಕಾಂಗ್ರೆಸ್ ಗೆ ಹೋಗೋದು ಪಕ್ಕಾ ಅಂತಾ ಚಿಕ್ಕನಗೌಡರ ಹೇಳಿದ್ದರು.ಆದನ್ನ ಈಗ ಅವರು ಖಚಿತ ಪಡಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಸ್ಪರ್ಧೆಮಾಡಿ ಸೋತಿದ್ದರು.ಆ ಚುನಾವಣೆಯಲ್ಲಿ ಅವರ ಸಂಭಂದಿ ಮಾಜಿ ಸಿಎಂ ಯಡಿಯೂರಪ್ಪ ಟಿಕೆಟ್ ಕೊಡಿಸುತ್ತಾರೆ,ನಾನೇ ಅಬ್ಯರ್ಥಿ ಅಂತಾ ಹೇಳಿಕೊಂಡು ಬಿಟ್ಟಿದ್ದರು. ಆದರೆ ಕೊನೆಗಳಿಗೆಯಲ್ಲಿ ಟಿಕೆಟ್ ತಪ್ಪಿದ ಮೇಲೆ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ಚಿಕ್ಕನಗೌಡರ ಈಗ ಬಿಜೆಪಿಗೆ ಬೈ ಬೈ ಹೇಳಿ ಕಾಂಗ್ರೆಸ್ ಬಾಗಿಲು ಬಂದಿದ್ದಾರೆ.

ಚಿಕ್ಕನಗೌಡರ ಕಾಂಗ್ರೆಸ್ ಸೇರ್ಪಡೆ ಮುಂಬರುವ ಲೋಕಸಭೆಯ ಚುನಾವಣೆ ಮೇಲೆ ಕಣ್ಣಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಆದರೆ ಲೋಕಸಭೆಯ ಟಿಕೆಟ್ ಈಗಾಗಲೇ ರಜತ್ ಹೆಸರು ಮಂಚೂಣಿಯಲ್ಲಿದೆ.

ಸಿಎಂ ಸಿದ್ಧರಾಮಯ್ಯ ಅವರ ಬೆಂಗಳೂರಿನ ನಿವಾಸದಲ್ಲಿ ಭೇಟಿಯಾದ ಚಿಕ್ಕನಗೌಡರ ಜೊತೆಯಲ್ಲಿ ಕಾಂಗ್ರಸ್ ಮುಖಂಡ ಶಿವಾನಂದ ಬೆಂತೂರ.ಹಾಗೂ ಎ.ಬಿ
ಉಪ್ಪಿನ ಉಪಸ್ಥಿತರಿದ್ದರು.

ಉದಯ ವಾರ್ತೆ


Share to all

You May Also Like

More From Author