ಹುಬ್ಬಳ್ಳಿಯಲ್ಲಿ ಬೀದಿ ಕಾಮಣ್ಣರ ಕಾಟ…ಬೀದಿ ಕಾಮಣ್ಣರನ್ನು ಹೆಡಮುರಿ ಕಟ್ಟಿದ ಹಳೇಹುಬ್ಬಳ್ಳಿ ಪೋಲೀಸರು..
ಹುಬ್ಬಳ್ಳಿ:- ಹಳೇಹುಬ್ಬಳ್ಳಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಚುಡಾಯಿಸಿದ ಪುಂಡರನ್ನು ಪತ್ತೆ ಹಚ್ಚಿದ ಹಳೇಹುಬ್ಬಳ್ಳಿ ಪೋಲೀಸರು ಅವರನ್ನು ಜೈಲಿಗೆ ಅಟ್ಟಿದ್ದಾರೆ..
ಅಪ್ರಾಪ್ತ ಬಾಲಕಿ ಬೆನ್ನು ಬಿದ್ದು ಚುಡಾಯಿಸಿದ್ದ ಬೀದಿ ಕಾಮಣ್ಣರ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಗಿತ್ತು.ಸಿಸಿಟಿವಿ ದೃಶ್ಯಗಳನ್ನು ಇಟ್ಟುಕೊಂಡು ಪೋಲೀಸರು ಆರೆಸ್ಟ್ ಮಾಡಿದ್ದಾರೆ..
ಬೀದಿ ಕಾಮಣ್ಣರ ಕಾಟದಿಂದ ಬಾಲಕಿ ಓಡಿಹೋದರೂ ಬೈಕ್ ನಲ್ಲಿ ಬಂದು ಅಡ್ಡ ಹಾಕಿ ಚುಡಾಯಿಸಿದ್ದರು.ಸ್ಥಳೀಯರು ಪ್ರಶ್ನೆ ಮಾಡುತ್ತಲೇ ಎಸ್ಕೇಪ್ ಆಗಿದ್ದ ಬೀದಿ ಕಾಮಣ್ಣರು ಈಗ ಜೈಲು ಕಂಬಿ ಎಣಿಸುವಂತಾಗಿದೆ.