ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರಿಂದ ಬರಶ್ಥಿತಿ ಪರಿಶೀಲನೆ.

Share to all

*ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರಿಂದ ನಾಳೆ ನ.6 ರಂದು ಹುಬ್ಬಳ್ಳಿ,ಅಣ್ಣಿಗೇರಿ ಮತ್ತು ಕುಂದಗೋಳ ತಾಲೂಕಿನಲ್ಲಿ ಬರಸ್ಥಿತಿ ಪರಿಶೀಲನೆ*

ಹುಬ್ಬಳ್ಳಿ:- ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕಾರ್ಮಿಕ ಸಚಿವ ಸಂತೋಷ ಲಾಡ ಅವರು ನಾಳೆಯ ಜನತಾ ದರ್ಶನ ಕಾರ್ಯಕ್ರಮದ ನಂತರ ಮಧ್ಯಾಹ್ನ ಹುಬ್ಬಳ್ಳಿ, ಅಣ್ಣಿಗೇರಿ ಮತ್ತು ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿ ಮತ್ತು ಬರ ಪರಿಹಾರ ಕಾಮಗಾರಿಗಳನ್ನು ಪರಿಶೀಲಿಸಿಲಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಕೆಸಿಡಿ ಆವರಣದ ಸೃಜನಾ ರಂಗಮಂದಿರದಲ್ಲಿ ಜಿಲ್ಲಾಡಳಿತ ಆಯೋಜಿಸಿರುವ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವ ಸಂತೋಷ ಲಾಡ್ ಅವರು ಭಾಗವಹಿಸಿ, ಸಾರ್ವಜನಿಕರ ಅಹವಾಲು, ದೂರುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಲಿದ್ದಾರೆ ಮತ್ತು ನಿಯಮಾನುಸಾರ ಅಹವಾಲುಗಳ ಇತ್ಯರ್ಥಕ್ಕೆ ಸ್ಥಳದಲ್ಲಿ ಕ್ರಮವಹಿಸಲಿದ್ದಾರೆ.

ನಂತರ ಮಧ್ಯಾಹ್ನ 2-45 ಗಂಟೆಗೆ ಧಾರವಾಡದಿಂದ ಹುಬ್ಬಳ್ಳಿ ತಾಲೂಕಿನ ಕುಸುಗಲ್ಲ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಪಶುಚಿಕಿತ್ಸಾಲಯ ಆವರಣದಲ್ಲಿ ಬರಡು ಜಾನುವಾರುಗಳ ಚಿಕಿತ್ಸಾ ಶಿಬಿರ ಉದ್ಘಾಟನೆ ಮಾಡುವರು.

ನಂತರ ಸಚಿವರು ಮದ್ಯಾಹ್ನ 3-15 ಗಂಟೆಗೆ
ಕುಸುಗಲ ಗ್ರಾಮದ ರೈತ ಶಿವಾನಂದ ಕಲ್ಲಪ್ಪ ಬೆಂಗೇರಿ ಅವರ ಜಮೀನದಲ್ಲಿನ ಮೆಣಸಿನಗಿಡ ಬೆಳೆ ವೀಕ್ಷಣಿ ಮಾಡುವರು.
ನಂತರ 3-45 ಕ್ಕೆ ಕಿರೇಸೂರ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕುಂದಗೋಳ
ತಾಲೂಕಿಗೆ ಕುಡಿಯವ ನೀರು ಸಂಗ್ರಹಿಸಿದ ಕರೆಗಳ ವಿಕ್ಷಣೆ ಮಾಡುವರು.

ನಂತರ ಸಚಿವರು ಕಿರೇಸೂರ ಗ್ರಾಮದಿಂದ ಕುಸುಗಲ್ಲ ಮಾರ್ಗವಾಗಿ ಇಂಗಳಹಳ್ಳಿ ರಸ್ತೆಯಲ್ಲಿ ರೇಲ್ವೇ ಹಳೆಯ ಹತ್ತಿರ ಕುಸುಗಲ್ಲ ಗ್ರಾಮದ ಇಂಗಳಹಳ್ಳಿ ರಸ್ತೆಯಲ್ಲಿರುವ ರಸ್ತೆ ಬದಿಯ ಕಾಲುವೆಯ ಹೂಳೆತ್ತುವ ನರೇಗಾ ಕಾಮಗಾರಿ ವೀಕ್ಷಣೆ ಮಾಡುವರು.

ಇಂಗಳಹಳ್ಳಿ ಮಾರ್ಗವಾಗಿ ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮಕ್ಕೆ ಆಗಮಿಸಿ, ನಲವಡಿ ಗ್ರಾಮದ ರೈತ ಚಂದ್ರಶೇಖರ ಚಕಾಲಿ ಅವರ ಜಮೀನಿದಲ್ಲಿ ನರೇಗಾ ಯೋಜನೆಯಡಿ ಮಾಡಿರುವ ಕೃಷಿ ಹೊಂಡ ವೀಕ್ಷಿಸುವರು.

ಸಂಜೆ 04-35 ಗಂಟೆಗೆ ಸಚಿವರು ನಲವಡಿ ಗ್ರಾಮದಿಂದ
ಇಂಗಳಹಳ್ಳಿ ಕ್ರಾಸ್ ಹತ್ತಿರ ಶಿರಗುಪ್ಪಿ ಗ್ರಾಮದ ರೈತ ಚನ್ನಬಸಪ್ಪ ಪುಟ್ಟಣ್ಣವರ ಅವರ ಜಮೀನಿನಲ್ಲಿ ಹತ್ತಿಬೆಳೆ ವೀಕ್ಷಣೆ ಮಾಡುವರು.

ಸಚಿವರು ಸಂಜೆ 05-20 ಗಂಟೆಗೆ ಕುಂದಗೋಳ ತಾಲೂಕಿನ ಯರಗುಪ್ಪಿ ಮಾರ್ಗವಾಗಿ ಯರಿನಾರಾಯಣಪುರ ಗ್ರಾಮದ ರೈತ ದೇವನಗೌಡ ಈಶ್ವರಗೌಡ ಪಾಟೀಲ ಅವರ ಜಮೀನಿನಲ್ಲಿ ಬೆಳೆದ ಮೆಣಸಿನಗಿಡ ಬೆಳೆಯ ವೀಕ್ಷಣೆ, ಶೇಷಾಂಕ ಎಂ ಸೊರಟೂರ ಅವರ ಜಮೀನಿನಲ್ಲಿ ಬೆಳೆದ ಕಡಲೆ ಹಾಗೂ ಗೋವಿ ಬೆಳೆಯ ವೀಕ್ಷಣೆ ಮತ್ತು ಶೇಖರಯ್ಯ ಹಿರೇಮಠ ಅವರ ಜಮೀನಿನಲ್ಲಿ ಬೆಳದ ಹತ್ತಿ ಬೆಳೆಯ ವೀಕ್ಷಣೆ ಮಾಡುವರು.

ನಂತರ ಸಚಿವರು ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಿಂದ ನಾಗರಹಳ್ಳಿ ಗ್ರಾಮದ ಮುಖಾಂತರ ಹುಬ್ಬಳ್ಳಿ ಪ್ರವಾಸಿ ಮಂದಿರಕ್ಕೆ ಆಗಮಿಸಿ,
ಸಂಜೆ 6 ಗಂಟೆಗೆ ಸುದ್ದಿಗೋಷ್ಟಿ ನಡೆಸಿ, ಮಾಧ್ಯಮ ಪ್ರತಿನಿಗಳಿಗೆ ಬರಸ್ಥಿತಿಯ ಮಾಹಿತಿ ನೀಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳಾದ ಪಿ. ಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author