ತುಮಕೂರು: ಜಿದ್ದಾಜಿದ್ದಿನ ಚನ್ನಪಟ್ಟಣ ಉಪಚುನಾವಣೆಯ ಮತದಾನ ಮುಗಿದಿದೆ. ಈಗ ಯಾರ್ ಗೆಲ್ತಾರೆ? ಯಾರ್ ಸೋಲ್ತಾರೆ ಅನ್ನೋದಷ್ಟೇ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಶುರುವಾಗಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲ್ಲುತ್ತಾರೆ ಎಂದು ಡಾ ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಭವಿಷ್ಯ ನುಡಿದರು.
ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಗುರೂಜಿ, 2016 ರಲ್ಲಿ ಹೆಚ್ ಡಿ ದೇವೆಗೌಡರು ತುಮಕೂರು ತಾಲೂಕಿನ ಚಿನಗ ಗ್ರಾಮದಲ್ಲಿರುವ ಮುಕಾಬಿಂಕಾ ದೇವಿ ಅಮ್ಮನ ಸನ್ನಿಧಿಯಲ್ಲಿ ಚಂಡಿಕಾಯಾಗ ಮಾಡಿಸಿದ್ದರು. ಅದರ ಫಲ 2024 ಕ್ಕೆ ಲಭಿಸಿದೆ. ಅಂದೇ ಮುಕಾಬಿಂಕಾ ದೇವಿ ನಿಖಿಲ್ ಕುಮಾರಸ್ವಾಮಿಯವರ ಭವಿಷ್ಯ ನುಡಿದಿತ್ತು.
2023 ರ ನಂತರ ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಶುರುವಾಗಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಅದರಂತೆ ನಿಖಿಲ್ ಕುಮಾರಸ್ವಾಮಿಗೆ 2023 ರಿಂದಲೇ ರಾಜಯೋಗ ಶುರುವಾಗಿದೆ. ನಿಖಿಲ್ ಕುಮಾರಸ್ವಾಮಿ ಮೇಲೆ ಭಗವತಿಯ ಪರಿಪೂರ್ಣ ಆಶೀರ್ವಾದ ಆಗಿದೆ. ಅಮ್ಮನವರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ನಿಖಿಲ್ ಕುಮಾರಸ್ವಾಮಿಗೆ ಮುಂದಿನ ದಿನಗಳಲ್ಲಿ ಅಮ್ಮನ ಆಶೀರ್ವಾದ, ಜಯಶೀಲರಾಗುವಂತಹ ಎಲ್ಲಾ ಅನುಗ್ರಹವನ್ನ ಅಮ್ಮನವರು ಮಾಡಿಕೊಟ್ಟಿದ್ದಾರೆ. ಈ ಬಾರಿ ಅಮ್ಮನವರ ಆಶಿರ್ವಾದ ಆಗಿರೋದ್ರಿಂದ ಖಂಡಿತವಾಗಿ ಗೆಲುವು ಖಚಿತವಾಗಿದೆ. ಅವರ ನಿರೀಕ್ಷೆಗೂ ಮಿರಿದ ಅಂತರದಿಂದ ಗೆಲುವ ಸಾಧಿಸಲಿದ್ದಾರೆ. ಯಾಕಂದ್ರೆ ಚಂಡಿಕಾಯಾಗದಲ್ಲಿ ಅಷ್ಟೊಂದು ರೀತಿಯಾದ ವಿಶೇಷತೆಗಳು ಇರುತ್ತೆ. ಯಾರು ಅನುಷ್ಠಾನವನ್ನ ಮಾಡಿ ವಿಶೇಷವಾಗಿ ದೇವಿಗೆ ಪೂಜೆಯನ್ನ ಸಲ್ಲಿಸ್ತಾರೋ, ಅವರಿಗೆ ಪರಿಪೂರ್ಣವಾದ ಆಶಿರ್ವಾದ ಪರಿಪಾಪ್ತಿಯಾಗುತ್ತೆ.
ಮಹಾಲಕ್ಷ್ಮಿ,ಮಹಾಕಾಳಿ, ಮಹಾ ಸರಸ್ಪತಿಯ ಸ್ವರೂಪಿಣಿಯಾಗಿರುವಂತಹ ಅಮ್ಮನವರ ಆಶಿರ್ವಾದ ಆಗಿರೋದ್ರಿಂದ. ಖಂಡಿತವಾಗಿ ಅವರ ಕುಟುಂಬಕ್ಕೆ ಒಳ್ಳೆಯ ಅನುಗ್ರಹ ಆಗುತ್ತೆ. ಹಿಂದಿನ ಎಲ್ಲ ನೋವುಗಳನ್ನ ಮರೆಸಿ ಮುಂದಿನ ಜೀವನ ಸುಖಮಯವಾಗಿರುತ್ತೆ. ಪ್ರತಿಯೊಂದು ಅಧಿಕಾರ ಸಿಗಬೇಕಾದರೆ ರಾಜಯೋಗ ಇರಬೇಕು. ರಾಜಯೋಗ ಇಲ್ಲದೇ ಅಧಿಕಾರ ಸಿಗಲಿಕ್ಕೆ ಸಾಧ್ಯವಿಲ್ಲ. ಅದರಂತೆ ಅಮ್ಮನವರ ಆಶಿರ್ವಾದದಿಂದ ಈಗ ನಿಖಿಲ್ ಗೆ ರಾಜಯೋಗ ಸಿಕ್ಕಿದೆ ಎಂದರು.