ನೆರೆಮನೆಯ ಪುಂಡರ ವಿಕೃತಿ: ಅಪ್ರಾಪ್ತೆ ಬಟ್ಟೆ ಬಿಚ್ಚಿ ರೇಪ್ʼಗೆ ಯತ್ನ, ಇಬ್ಬರು ಅರೆಸ್ಟ್

Share to all

ಆನೇಕಲ್:- ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿ ಕರ್ನಾಟಕದಲ್ಲಿ ರೇಪ್ ಕೇಸ್ ಗಳು ಹೆಚ್ಚಾಗುತ್ತಿರುವುದು ಆತಂಕ ಹುಟ್ಟುವಂತೆ ಮಾಡಿದೆ. ದಿನಕ್ಕೆ ಒಂದಿಲ್ಲೊಂದು ಇಂತಹ ಕೇಸ್ ಗಳು ದಾಖಲಾಗುತ್ತಿದ್ದು, ಹೆಣ್ಣು ಮಕ್ಕಳಿರುವ ಪೋಷಕರಿಗೆ ಭೀತಿಯನ್ನಾ ಉಂಟು ಮಾಡಿದೆ.

ಅದರಂತೆ ನಗರದಲ್ಲಿ ಮತ್ತೊಂದು ಕೇಸ್ ನಡೆದಿದೆ. ಪಕ್ಕದ ಮನೆ ಯುವಕರಿಂದ ಸುಮಾರು 15 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸರು, ಶ್ರೀಕಂಠ ಮತ್ತು ವಿಜಯ್ ನನ್ನು ಅರೆಸ್ಟ್ ಮಾಡಿದ್ದಾರೆ. ಬಾಲಕಿ, ಕಳೆದ ಶುಕ್ರವಾರ ರಾತ್ರಿ ಊಟ ಮಾಡಿ ಮನೆಯಿಂದ ಹೊರಬಂದಿದ್ದಳು. ಈ ವೇಳೆ ಚಾಕೊಲೇಟ್ ಕೊಡುವುದಾಗಿ ಅಸಾಮಿಗಳು, ಪುಸಲಾಯಿಸಿದ್ದರು.

ಒಪ್ಪದಿದ್ದಾಗ ಸಮೀಪದ ದೇವಸ್ಥಾನದ ಬಳಿ ಎಳೆದೊಯ್ದು ಕಿರುಕುಳ ಕೊಟ್ಟಿದ್ದಾರೆ. ಬಾಲಕಿ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಬಟ್ಟೆ ಬಿಚ್ಚಲು ಯತ್ನಿಸಿದಾಗಿ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ.

ಕೂಡಲೇ ಆತಂಕಗೊಂಡ ಆರೋಪಿಗಳು, ಬಾಲಕಿ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಬಾಲಕಿ ತಾಯಿಯಿಂದ ದೂರು ನೀಡಲಾಗಿದ್ದು, ದೂರು ಆಧರಿಸಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share to all

You May Also Like

More From Author