ಪೋಲೀಸರ ಕೈಯಲ್ಲಿರಬೇಕಾದ 303 ರೈಪಲ್ ಹೋಮ್ ಗಾಡ್೯ ಕೈಯಲ್ಲಿ..ನಿಮಗ್ಯಾಕ್ರೀ ರೈಪಲ್ ಅಂದರೆ ಗುಂಡು ಇಲ್ಲಾ ಬಿಡ್ರೀ ಅಂದ ಹೋಮ್ ಗಾಡ್೯..
ಹುಬ್ಬಳ್ಳಿ:- ಹುಬ್ಬಳ್ಳಿ ಉಪನಗರ ಪೋಲೀಸ ಠಾಣೆಯ ರೈಪಲ್ ಗಳು ಕಂಡ ಕಂಡವರ ಕೈಯಲ್ಲಿ..ಏನ್ರೀ ನಿಮ್ಮ ಕಡೆ ರೈಪಲ್ ಅಂದ್ರೆ ಗುಂಡು ಇಲ್ಲಾ ಬಿಡ್ರೀ ಹಂಗೇ ತೊಗೊಂಡು ಬಂದೇನಿ ಅಂತಾ ಹೋಮ್ ಗಾಡ್೯ ನಿನ್ನೆ ರಾತ್ರಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಂದೂಕಿನೊಂದಿಗೆ ಮಜಾ ಉಡಾಯಿಸಿದ ಘಟನೆ ನಡೆದಿದೆ..
303 ರೈಪಲ್ ಗಳನ್ನ ಪೋಲೀಸ ಠಾಣೆಯಿಂದ ಹೊರಗೆ ಒಯ್ಯಬೇಕಾದರೆ ಎಂಟ್ರಿ ಮಾಡಿ ಪೋಲೀಸರೇ ಒಯ್ಯಬೇಕು.ಆದರೆ ನಿನ್ನೆ ರಾತ್ರಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹೋಮ್ ಗಾಡ್೯ ಒಬ್ಬ ಬಂದೂಕನ್ನು ಹೆಗಲಿಗೇರಿಸಿಕೊಂಡು ಮಜಾ ಉಡಾಯಿಸಿದ್ದಾನೆ.
ಹೋಮ್ ಗಾಡ್೯ ಕೈಯಲ್ಲಿ ರೈಪಲ್ ಕೊಟ್ಟು ಪಾನ ತರಲು ಕಳಿಸಿದ ಆ ಪೋಲೀಸಪ್ಪನನ್ನು ಇನ್ಸ್ಪೆಕ್ಟರ್ ಹೂಗಾರ ಸಾಹೇಬ್ರು ವಿಚಾರಣೆ ಮಾಡಬೇಕು.ಇಲ್ಲಾ ಅಂದರೆ ಇನ್ನೊಂದು ದಿನ ರೈಪಲ್ ಕೊಟ್ಟು ಬೇರೇ ಏನೇನೋ ತರಿಸಿಕೊಳ್ಳಬಹುದು.