ನೇತ್ರಾವತಿ ದಳದ ನಕ್ಸಲೈಟ್ ವಿಕ್ರಂ ಗೌಡನ ಎನ್ʼಕೌಂಟರ್! ಈತನ ಹಿನ್ನೆಲೆ ಏನೂ ಗೊತ್ತಾ..?

Share to all

ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಎನ್​ಕೌಂಟರ್​ನಲ್ಲಿ ನಕ್ಸಲ್ ನಾಯಕ‌ ವಿಕ್ರಂ ಗೌಡ ಹತನಾಗಿದ್ದಾನೆ. ನಕ್ಸಲ್ ನಾಯಕ ವಿಕ್ರಂ ಗೌಡ ಕಬ್ಬಿನಾಲೆ ಮೂಲದವನಾಗಿದ್ದಾನೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು. ಹೀಗಾಗಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಆರಂಭಿಸಿತ್ತು. ಸೋಮವಾರ ರಾತ್ರಿ ನಡೆಸಿದ ಎನ್​ಕೌಂಟರ್​ನಲ್ಲಿ ನಕ್ಸಲ್ ನಾಯಕ‌ ವಿಕ್ರಂ ಗೌಡ ಹತ್ಯೆಯಾಗಿದ್ದಾನೆ. ಈತ ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಎಂಬುದು ತಿಳಿದುಬಂದಿದೆ. ನಕ್ಸಲ್ ಚಟುವಟಿಕೆಗಳ ಸಂಬಂಧ ವಿಕ್ರಂ ಗೌಡ ಮೇಲೆ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿದ್ದವು.

ವಿಕ್ರಂ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ. ಆ ಸಂದರ್ಭದಲ್ಲಿ ನಕ್ಸಲ್​ ಚಳವಳಿಗೆ ಧುಮುಕಿದ್ದ ವಿಕ್ರಂ ಗೌಡ, ನಂತರದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ನಕ್ಸಲ್ ಹೋರಾಟದ ವೇಳೆ ಕರಾವಳಿ ಭಾಗದಲ್ಲಿ ನೇತ್ರಾವತಿ ದಳವನ್ನು ಮುನ್ನೆಡೆಸಿದ್ದ. ಮತ್ತೊಂದೆಡೆ, ಮಲೆನಾಡು ಭಾಗದಲ್ಲಿ ಮುಂಡಗಾರು ಲತಾ ತಂಡ ಸಕ್ರಿಯವಾಗಿತ್ತು.

ನಕ್ಸಲ್ ನಾಯಕ ಸಾಕೇತ್ ರಾಜನ್ ಗರಡಿಯಲ್ಲಿ ವಿಕ್ರಮ್ ಗೌಡ ಪಳಗಿದ್ದ. ಸಾಕೇತ್ ರಾಜನ್ ಕಾಲದಲ್ಲಿ ನಕ್ಸಲ್ ಚಟುವಟಿಕೆಗಳು ಉತ್ತುಂಗದಲ್ಲಿದ್ದವು. 2005 ಫೆಬ್ರವರಿ 5ರಂದು ಮೆಣಸಿನ ಹಾಡ್ಯದಲ್ಲಿ ಸಾಕೇತ್​ ರಾಜನ್​ನನ್ನು ಎನ್​ಕೌಂಟರ್ ಮಾಡಲಾಗಿದೆ. ಸಾಕೇತ್ ರಾಜನ್ ಜೊತೆಯಿದ್ದ ವಿಕ್ರಮ್ ಗೌಡ ಅಲ್ಲಿಂದ ತಪ್ಪಿಸಿಕೊಂಡಿದ್ದ. ಬಳಿಕ ವಿಕ್ರಂಗೌಡ ನಕ್ಸಲ್​​​ ತಂಡವನ್ನು ಮುನ್ನಡೆಸ್ತಿದ್ದ. ತನ್ನ ನಾಯಕನ ಸಾವಿಗೆ ರಿವೇಂಜ್ ತೀರಿಸುವ ಸಲುವಾಗಿ ಹೊಂಚು ಹಾಕಿದ್ದ.

ವಿಕ್ರಂಗೌಡ ಕಳೆದ 20 ವರ್ಷಗಳಿಂದ ನಕ್ಸಲೈಟ್ ಆಗಿ ತಲೆಮರೆಸಿಕೊಂಡಿದ್ದ. 2016ರಲ್ಲಿ ಕೇರಳದ ನೀಲಾಂಬುರ್‌ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ನಕ್ಸಲ್‌ ನಿಗ್ರಹ ಪಡೆಯೊಂದಿಗೆ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದರು. ಆಗಲೂ ​ವಿಕ್ರಂ ಗೌಡ ತಲೆಮರೆಸಿಕೊಂಡಿದ್ದ. ಕೇರಳದಲ್ಲಿ ಚಟುವಟಿಕೆಗಳನ್ನು ನಡೆಸ್ತಿದ್ದ ವಿಕ್ರಂಗೌಡ ಕರ್ನಾಟಕಕ್ಕೆ ಆಗಮಿಸಿದ್ದ. ಹೆಬ್ರಿ-ಕಾರ್ಕಳ ಪ್ರದೇಶದಲ್ಲಿ ನಕ್ಸಲ್ ಓಡಾಟ ಹೆಚ್ಚಾಗಿತ್ತು. ಇದೀಗ ಮತ್ತೆ ಕಸ್ತೂರಿ ರಂಗನ್​​ ವರದಿ ಜಾರಿ, ಅರಣ್ಯ ಒತ್ತುವರಿ ತೆರವು ವಿಚಾರವಾಗಿ ನಕ್ಸಲರು ಸಭೆಗಳನ್ನು ನಡೆಸಿ, ಚಟುವಟಿಕೆ ಆರಂಭಿಸಿದ್ದಾರೆ.

 


Share to all

You May Also Like

More From Author