ಕೇಶ್ವಾಪೂರ ಪೊಲೀಸ್ ಇನ್ಸಪೆಕ್ಟರ್ UH ಸಾತೇನಹಳ್ಳಿ ವಿರುದ್ದ ಆಧಾರ ರಹಿತ ಗಂಭೀರ ಆರೋಪ.
ಹುಬ್ಬಳ್ಳಿ:-ಪತಿ ಹಾಗೂ ಪತ್ನಿಯ ಕುಟುಂಬದ ನಡುವೆ ಗಲಾಟೆಯಾಗಿ ಕೇಶ್ವಾಪುರ ಪೋಲೀಸ ಠಾಣೆ ಮೆಟ್ಟಿಲೇರಿತ್ತು.ಆ ಗಲಾಟೆ ಪ್ರಕರಣದಲ್ಲಿ ಪತ್ನಿಯ ಕುಟುಂಬಕ್ಕೆ ಸಹಾಯ ಮಾಡಲು ಪತಿ ಹರೀಶಗೆ ಕೇಶ್ವಾಪುರ ಪೋಲೀಸ ಠಾಣೆಯ ಇನ್ಸ್ಪೆಕ್ಟರ್ ಯು.ಎಚ್.ಸಾತೇನಹಳ್ಳಿ ವಿರುದ್ದ ಈಗ ಗಂಭೀರ ಆರೋಪ ಮಾಡಿದ್ದಾರೆ..
ಕೇಸ್ ವಾಪಸ್ ತಗೆದುಕೊಳ್ಳದೆ ಹೋದ್ರೆ ರೌಡಿ ಶೀಟರ್ ಹಾಕೋದಾಗಿ ಬೆದರಿಕಿದ್ದಾರೆಂದು ಆರೋಪ..
#ಏನಿದು ಪ್ರಕರಣ#
ಕೇಶ್ವಾಪೂರ ನಿವಾಸಿ
ಮನೆಯ ವಿಷಯಕ್ಕಾಗಿ ಹರೀಶ್ ಪೂಜಾರಿ ಹಾಗೂ ಪತ್ನಿ ಮನೆಯವರ ನಡುವೆ ಗಲಾಟೆಯಾಗಿರತ್ತೆ.
ಹರೀಶ್ ಪೂಜಾರಿ ಕಳೆದ ವರ್ಷದ ಹಿಂದೆ ತನ್ನ ಪತ್ನಿಗೆ ವಿಚ್ಚೇಧನ ನೀಡಿರುತ್ತಾನೆ.
ಆದ್ರೆ ಹರೀಶ್ ಇಬ್ಬರ ಹೆಸರಲ್ಲಿ ಒಂದು ಫ್ಲ್ಯಾಟ್ ಖರೀದಿ ಮಾಡಿದ್ದ.ಅದೇ ಪ್ಲ್ಯಾಟ್ ವಿಷಯಕ್ಕೆಎರಡು ಕುಟುಂಬಗಳ ನಡುವೆ ಗಲಾಟೆ ಆರಂಭವಾಗಿತ್ತಂತೆ.
ಗಲಾಟೆ ಮಾಡೋ ದೃಶ್ಯ ಸಹ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಚ್ಚೇಧನ ಬಳಿಕವೂ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು.ಕಳೆದ ಅಗಸ್ಟ್ 22 ರಂದು ಹರೀಶ್ ಪೂಜಾರಿ ಪತ್ನಿ ವಿನಯಾ ತಂದೆ ಸಂಭಂದಿಕರು ಗಲಾಟೆ ಮಾಡಿದ್ದರು.ಹರೀಶ್ ಪೂಜಾರಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ರಂತೆ
ರಾಡ್ ನಿಂದ ಹರೀಶ್ ತಂದೆ ಜುಮ್ಮರ್ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ.
ಹಲ್ಲೆ ಮಾಡೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗಲಾಟೆ ಬಳಿಕ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಹರೀಶ
ಐದು ಜನರ ವಿರುದ್ಧ ದೂರು ನೀಡಿದ್ದರು.
ದೂರು ದಾಖಲಾದ ಮರು ದಿನ ಆ ದೂರು ವಾಪಸ್ ತಗೆದುಕೊಳ್ಳಲು ಇನ್ಸಪೆಕ್ಟರ್ ಸಾತೇನಹಳ್ಳಿ ಒತ್ತಡ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ನೀನು ಕೇಸ್ ತೆಗೆದುಕೊಳ್ಳದೆ ಹೋದ್ರೆ ರೌಡಿ ಶೀಟ ಹಾಕ್ತೀನಿ ಎಂದು ಬೆದರಿಕೆ ಹಾಕಿದ್ದಾರೆಂದು ಆರೋಪ.
ನನಗೆ ಜೀವ ಭಯ ಇದೆ ಎಂದು ಹರೀಶ್ ಪೂಜಾರಿ. ಅಳಲು ತೋಡಿಕೊಂಡಿದ್ದಾನೆ.
ಹರೀಶ ಪೂಜಾರಿ ಮಾಡತಿರೋ ಆರೋಪ ಎಷ್ಟರ ಮಟ್ಟಿಗೆ ಸರಿ ಅನ್ನೋದ ಈಗ ಪ್ರಶ್ನೆಯಾಗಿದೆ. ಈ ಪ್ರಕರಣ ನಡೆದಿದ್ದು ಅಗಸ್ಟ 22.
ಈ ಪ್ರಕರಣದಲ್ಲಿ ಈಗಾಗಲೇ ಎರಡು ಕಡೆಯಿಂದ ದೂರು ಪ್ರತಿದೂರು ದಾಖಲಾಗಿ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ.ಪ್ರಕರಣ ನ್ಯಾಯಾಲಯದಲ್ಲಿದೆ.ಘಟನೆ ನಡೆದು ಮೂರು ತಿಂಗಳ ಮೇಲೆ ಆದ ಮೇಲೆ ಹರೀಶ ಯಾಕೆ ಈಗ ಆರೋಪ ಮಾಡತಿದ್ದಾನೆ.ಆದರೆ ಹರೀಶ ಹೇಳೋ ಪ್ರಕಾರ ನನಗೆ ಜೀವ ಭಯ ಇರೋ ಕಾರಣ ನಾನು ಸುಮ್ಮನಿದ್ದೇ ಈಗ ಮೊನ್ನೆ ಕೇಶ್ವಪುರ ಪೋಲೀಸರ ವಿರುದ್ಧ ಸುದ್ದಿ ಬಂದ ಹಿನ್ನೆಲೆಯಲ್ಲಿ ಈಗ ಬಂದು ಹೇಳಿಕೆ ಕೊಟ್ಟಿದ್ದೇನೆ ಎಂದಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ