Pakistan Record: 13 ಸೋಲು, ಕೆಟ್ಟ ದಾಖಲೆಗೆ ಕೊರಳೊಡ್ಡಿದ ಪಾಕಿಸ್ತಾನ್!

Share to all

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕ್ ಹೀನಾಯ ಪ್ರದರ್ಶನ ಕೊಟ್ಟಿದೆ. ಹ್ಯಾಟ್ರಿಕ್ ಸೋಲಿನೊಂದಿಗೆ 2024 ರಲ್ಲಿ ಅತ್ಯಧಿಕ ಟಿ20 ಪಂದ್ಯಗಳನ್ನು ಸೋತ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನ್ ಅಗ್ರಸ್ಥಾನಕ್ಕೇರಿದೆ.

ಪಾಕಿಸ್ತಾನ್ ತಂಡವು ಒಟ್ಟು 22 ಟಿ20 ಪಂದ್ಯಗಳನ್ನಾಡಿದ್ದು, ಈ ವೇಳೆ ಗೆದ್ದಿರುವುದು ಕೇವಲ 7 ಮ್ಯಾಚ್​ಗಳಲ್ಲಿ ಮಾತ್ರ. ಇನ್ನು 2 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿವೆ. ಇನ್ನುಳಿದ 13 ಪಂದ್ಯಗಳಲ್ಲಿ ಮುಗ್ಗರಿಸುವ ಮೂಲಕ ಪಾಕ್ ಪಡೆ ಈ ವರ್ಷ ಅತ್ಯಧಿಕ ಟಿ20 ಪಂದ್ಯಗಳನ್ನು ಸೋತ ಪೂರ್ಣ ಸದಸ್ಯ ತಂಡ ಎನಿಸಿಕೊಂಡಿದೆ.

ಮತ್ತೊಂದೆಡೆ ಈ ವರ್ಷ ಆಡಿದ 26 ಪಂದ್ಯಗಳಲ್ಲಿ ಟೀಮ್ ಇಂಡಿಯಾ 24 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಭಾರತ ತಂಡ ಸೋತಿರುವುದು ಝಿಂಬಾಬ್ವೆ ಮತ್ತು ಸೌತ್ ಆಫ್ರಿಕಾ ವಿರುದ್ಧ ಮಾತ್ರ. ಅದರಲ್ಲೂ ಟಿ20 ವಿಶ್ವಕಪ್​ನಲ್ಲಿ ಸೋಲಿಲ್ಲದ ಸರದಾರನಾಗಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದೆ

ಆದರೆ ಅತ್ತ ನಾಯಕತ್ವದ ಬದಲಾವಣೆಯೊಂದಿಗೆ ಹಲವು ಸರಣಿಗಳನ್ನು ಆಡಿದ ಪಾಕಿಸ್ತಾನ್ ಅತ್ಯಂತ ಹೀನಾಯ ಪ್ರದರ್ಶನ ನೀಡುತ್ತಾ ಬಂದಿದೆ. ಇದೀಗ ಮೊಹಮ್ಮದ್ ರಿಝ್ವಾನ್ ಮುಂದಾಳತ್ವದಲ್ಲಿ ಕಣಕ್ಕಿಳಿದಿರುವ ಪಾಕ್ ಪಡೆ ಆಸ್ಟ್ರೇಲಿಯಾದಲ್ಲಿ ವೈಟ್ ವಾಶ್ ಮುಖಭಂಗ ಅನುಭವಿಸಿದೆ. ಇದರೊಂದಿಗೆ ಈ ವರ್ಷ ಅತ್ಯಧಿಕ ಟಿ20 ಪಂದ್ಯಗಳಲ್ಲಿ ಪರಾಜಯಗೊಂಡ ಪೂರ್ಣ ಸದಸ್ಯ ತಂಡ ಎನಿಸಿಕೊಂಡಿದೆ.


Share to all

You May Also Like

More From Author