ಛೋಟಾ ಮುಂಬೈಯ ಖ್ಯಾತಿಯ ಹುಬ್ಬಳ್ಳಿಯಲ್ಲಿ ದಾರೂಗೆ ಇಲ್ಲಾ ಟೈಂ..ಹುಬ್ಬಳ್ಳಿಯಲ್ಲಿ ಮಿಡ್ ನೈಟ್ ಆದರೂ ದಾರೂ ಧರ್ಭಾರ..ತಿಂಗಳು ತಿಂಗಳು ಪ್ರಸಾದ ಪಡೆಯುವ ಅಧಿಕಾರಿಗಳು ಗಪ್ ಚುಪ್..

Share to all

ಛೋಟಾ ಮುಂಬೈಯ ಖ್ಯಾತಿಯ ಹುಬ್ಬಳ್ಳಿಯಲ್ಲಿ ದಾರೂಗೆ ಇಲ್ಲಾ ಟೈಂ..ಹುಬ್ಬಳ್ಳಿಯಲ್ಲಿ ಮಿಡ್ ನೈಟ್ ಆದರೂ ದಾರೂ ಧರ್ಭಾರ..ತಿಂಗಳು ತಿಂಗಳು ಪ್ರಸಾದ ಪಡೆಯುವ ಅಧಿಕಾರಿಗಳು ಗಪ್ ಚುಪ್..

ಹುಬ್ಬಳ್ಳಿ:- ಛೋಟಾ ಮುಂಬೈ ಖ್ಯಾತಿಯ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಿಲ್ಲಾ ಟೈಂ ಬಾಂಬ್..ರಾತ್ರಿ ಒಂದು ಘಂಟೆಯಾದರೂ ಬಿಂದಾಸ್ ಆಗಿ ಸಿಗುತ್ತೆ ಸರಾಯಿ ಮತ್ತು ಹಸಿಬಿಸಿ ಊಟಾ..

ಹುಬ್ಬಳ್ಳಿಯ ಚೆನ್ನಮ್ಮಾ ವೃತ್ತದ ಕೂಗಳತೆ ಮತ್ತು ಪೋಲೀಸ ಠಾಣೆಯ ಬೆನ್ನ ಹಿಂದಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಒಂದರಲ್ಲಿ ಹೆಂಗೆಂಗ ಕತ್ತಲಾಗುತ್ತೆ ಹಂಗೆ ದಾರೂ ವ್ಯಾಪಾರ ಬಲು ಜೋರು.

ಆ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಸರಾಯಿ ಮಾರಾಟದಲ್ಲಿ ಕಾನೂನು ಗಾಳಿಗೆ ತೂರಿದರೆ, ರೆಸ್ಟೋರೆಂಟ್ ಗಂತೂ ಟ್ರೇಡ್ ಲೈಸನ್ಸ್ ಪಡೆಯುವಾಗ ನೀಡಲಾದ ನಿಯಮಗಳನ್ನಂತೂ ಒಂದೂ ಪಾಲಿಸತಿಲ್ಲಾ ಅನ್ನೋ ಆರೋಪ ಕೇಳಿ ಬಂದಿದೆ.

ತಿಂಗಳು ತಿಂಗಳು ಪ್ರಸಾದ ಪಡೆಯುವ ಅಧಿಕಾರಿಗಳು ಈ ಬಾರ್ ಬಗ್ಗೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಅನ್ನೋದಕ್ಕೆ ಮತ್ತಿನ್ನೇನು ಸಾಕ್ಷಿ ಕೊಡಬೇಕು ಎನ್ನುವಂತಾಗಿದೆ.

ಕತ್ತಲು ಬೆಳಕಿನ ಆಟದಲ್ಲಿ ಸರಾಯಿ ನಶೆಯಲ್ಲಿ ಈ ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಏನು ಕೊಡತಾರೋ ದೇವರೇ ಬಲ್ಲಿ ಇಂತಹ ರೆಸ್ಟೋರೆಂಟ್ ಗೆ ಟ್ರೇಡ್ ಲೈಸನ್ಸ್ ಕೊಟ್ಟ ಪಾಲಿಕೆಯ ಅಧಿಕಾರಿಗಳು ಒಂದ ಸಲವಾದರೂ ವಿಸಿಟ್ ಮಾಡಿ ಪರಿಶೀಲನೆ ಮಾಡಿದ ಉದಾಹರಣೆಗಳು ಇಲ್ಲವೇ ಇಲ್ಲಾ.ಈಗಲಾದರೂ ಪಾಲಿಕೆಯ ಖಡಕ್ ಆರೋಗ್ಯ ಅಧಿಕಾರಿಗಳು ಈ ಹೊಟೆಲ್ ಒಳಗಡೆ ಹೊಕ್ಕು ಒಂದ ಸಲ ಪರಿಶೀಲನೆ ಮಾಡಿದರೆ ಗೊತ್ತಾಗುತ್ತೇ ಅಲ್ಲಿಯ ಅಸಲಿ ಆಟ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author