ಚಾಮರಾಜನಗರ:- ಚಾಮರಾಜನಗರ ಎಪ್ಪತ್ತೇಳು ಮಲೆಯ ಒಡೆಯ ಎಂದೇ ಭಕ್ತರ ಹೃದಯದಲ್ಲಿ ನೆಲೆಸಿರುವ ಪವಾಡ ಪುರುಷ ಮಹಾದೇಶ್ವರ ಇದೀಗ ಕೋಟಿ ಕೋಟಿ ರೂ. ಒಡೆಯನೂ
ಹೌದು.ಮಾದಪ್ಪನ ಸನ್ನಿಧಿಗೆ ಬರುವ ಲಕ್ಷಾಂತರ ಭಕ್ತರು, ಆತನ ಹುಂಡಿಗೆ ಉದಾರವಾಗಿ ಕಾಣಿಕೆ ಸಲ್ಲಿಸುತ್ತಿದ್ದಾರೆ. ಅದರಂತೆ ಹನೂರು ತಾಲೂಕಿನ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ಈ ಬಾರಿ 27 ದಿನಗಳಲ್ಲಿ ಬರೋಬ್ಬರಿ 2.43 ಕೋಟಿ ರೂ. ಸಂಗ್ರಹವಾಗಿದೆ. 63 ಗ್ರಾಂ ಚಿನ್ನಾಭರಣ ಕಾಣಿಕೆ ರೂಪದಲ್ಲಿ ಸಲ್ಲಿಕೆ ಮಾಡಲಾಗಿದೆ.
ಹಾಗೇ ಅರ್ಧ ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹುಂಡಿ ಎಣಿಕೆ ಕಾರ್ಯ ನಡೆಸಿತು. ಮಾದಪ್ಪನಿಗೆ ಕಾಣಿಕೆ ರೂಪದಲ್ಲಿ ಬರುವ ಹಣ, ಕಾಣಿಕೆ ಅದೇ ಭಕ್ತರ ಸೌಲಭ್ಯ, ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗುತ್ತಿದೆ.