ಹಗರಣ, ಹಗರಣ: ರಾಜ್ಯ ಸಚಿವರೊಬ್ಬರ ತಲೆದಂಡ ಫಿಕ್ಸ್!?

Share to all

ಬೆಂಗಳೂರು:– ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಬಂದು ಒಂದುವರೆ ವರ್ಷ ಕಳೆದಿದೆ. ಭಾರೀ ಬಹುಮತದಿಂದ ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರ ದಿನಕೊಂದು ವಿವಾದವನ್ನು ಮೈಗೆಳೆದುಕೊಳ್ಳುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ರಾಜ್ಯದಲ್ಲಿ ನಡೆಯುತ್ತಿರುವ ವಿವಾದಗಳನ್ನು ಇತರ ರಾಜ್ಯಗಳ ಉಪ ಚುನಾವಣೆಯಲ್ಲಿ ಬಿಜೆಪಿ ಬಳಕೆ ಮಾಡುತ್ತಿದೆ. ಮುಡಾ ಹಗರಣ, ವಕ್ಫ್ ವಿವಾದ ಹಾಗೂ ವಾಲ್ಮೀಕಿ ಹಗರಣ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಆರೋಪಗಳನ್ನು ಕೇಂದ್ರದ ಬಿಜೆಪಿ ನಾಯಕರು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡುತ್ತಿದ್ದಾರೆ‌. ಇದು ಕೈ ಹೈಕಮಾಂಡ್ ನಾಯಕರ ತಲೆ ನೋವಿಗೆ ಕಾರಣವಾಗುತ್ತಿದೆ

ಜನಾದೇಶದ ಪ್ರಕಾರ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದಿಲ್ಲೊಂದು ಸಮಸ್ಯೆ ಬರುತ್ತಲೇ ಇದೆ. ಮೊದಲೆಲ್ಲಾ ವಾಲ್ಮೀಕಿ, ಮುಡಾ ಹಗರಣ ಆಯ್ತು.

ಇದೀಗ ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲೀಗುತ್ತಿದೆ. ಈ ಬಗ್ಗೆ ಸ್ವತಹ ಪ್ರಧಾನಿ ಮೋದಿ ಅವರೇ ಮಾತಾಡಿದ್ದು, ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡುವಂತೆ ಮಾಡಿದೆ. ಹೀಗಾಗಿ ಸಚಿವರೊಬ್ಬರ ತಲೆದಂಡ ಫಿಕ್ಸ್ ಎನ್ನಲಾಗಿದೆ.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ರಾಜೀನಾಮೆ ಪಡೆಯಲು ಸಿದ್ಧತೆ ನಡೆಯುತ್ತಿದೆ ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲೇ ಕೇಳಿ ಬಂದಿದೆ..

ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ಹಗರಣದ ಆರೋಪ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿತ್ತು. ಮಹಾರಾಷ್ಟ್ರ ಚುನಾವಣೆಯಲ್ಲೂ ಕಾಂಗ್ರೆಸ್ ಪಾಲಿಗೆ ಕಿರಿಕಿರಿಯಾಗಿತ್ತು. ರಾಜ್ಯಪಾಲರಿಗೆ ದೂರು ನೀಡಿ, ಬಂದ್‌ಗೂ ಬಾರ್ ಮಾಲೀಕರು ಮುಂದಾಗಿದ್ದರು.

ಮಹಾರಾಷ್ಟ್ರ ಚುನಾವಣೆಯ ಸಮಯದಲ್ಲೂ ವಿಪಕ್ಷಗಳು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದು ಕಾಂಗ್ರೆಸ್‌ಗೆ ಇರುಸು ಮುರುಸು ತಂದಿತ್ತು. ಈ ವಿಚಾರದಿಂದ ಸಚಿವ ತಿಮ್ಮಾಪುರ್ ಮೇಲೆ ಹೈಕಮಾಂಡ್ ಭಾರೀ ಅಸಮಾಧಾನಗೊಂಡಿತ್ತು

ತಿಮ್ಮಾಪುರ್ ರಾಜೀನಾಮೆ ವಿಚಾರದಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡು ಬನ್ನಿ ಎಐಸಿಸಿ ನಾಯಕರು ಸಿದ್ದರಾಮಯ್ಯಗೆ ಸೂಚಿಸಿದ್ದರು. ಎಐಸಿಸಿ ಪ್ರಮುಖ ನಾಯಕರ ಜೊತೆಗಿನ ಮಾತುಕತೆಯ ವೇಳೆ ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂಬ ಸಂದೇಶವನ್ನು ಸಿಎಂ ರವಾನೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಎರಡು ಕರ್ನಾಟಕದ ಉಪಚುನಾವಣೆ ಮತ್ತು ಜಾರ್ಖಂಡ್‌, ಮಹಾರಾಷ್ಟ್ರ ಚುನಾವಣೆಯ ಬಳಿಕ ತಿಮ್ಮಾಪೂರ್‌ ವಿಚಾರದಲ್ಲಿ ಹೈಕಾಂಡ್‌ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಒಟ್ಟಾರೆ ರಾಜ್ಯ ಸರ್ಕಾರದಲ್ಲಿ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು, ಇದು ವಿಪಕ್ಷಗಳಿಗೆ ಆಹಾರವಾಗಿದೆ.


Share to all

You May Also Like

More From Author