ಎಣ್ಣೆ ಪ್ರಿಯರೇ ಗಮನಿಸಿ.. ನಿಮಗೊಂದು ಶಾಕಿಂಗ್‌ ನ್ಯೂಸ್‌: ಇನ್ಮುಂದೆ ಈ ರೂಲ್ಸ್‌ ಕಡ್ಡಾಯ!

Share to all

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಕೂಡ ಪ್ರಪಂಚದಾದ್ಯಂತ ಮದ್ಯಪ್ರಿಯರ ಸಂಖ್ಯೆ ಏನು ಕಡಿಮೆ ಆಗಿಲ್ಲ. ಅದರಲ್ಲೂ ವಿಶೇಷವಾಗಿ ಭಾರತದಂತಹ ದೇಶದಲ್ಲಿ ಮದ್ಯಪಾನಿಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಬೆಲೆ ದಿನೇ ದಿನೇ ಅಧಿಕವಾದರೂ ಕೂಡ ಮದ್ಯಪಾನಿಗಳ ಸಂಖ್ಯೆ ಏನು ಕಡಿಮೆ ಆಗ್ತಾ ಇಲ್ಲ. ಸರ್ಕಾರಗಳು ಕೂಡ ಮದ್ಯಕ್ಕೆ ಆಗಾಗ ಬೆಲೆ ಏರಿಕೆ ಮಾಡುವ ಮೂಲಕ ಸರ್ಕಾರದ ಖಜಾನೆ ಹೆಚ್ಚಿಸಿಕೊಳ್ಳುತ್ತದೆ. ಮಾತ್ರವಲ್ಲ ಅತೀ ಹೆಚ್ಚು ತೆರಿಗೆ ನೀಡುವ ಇಲಾಖೆ ಕೂಡ ಇದೇ ಆಗಿದೆ.

ಇದರ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸುವುದನ್ನು ಇನ್ಮುಂದೆ ತಡೆಯಲಾಗುವುದಿಲ್ಲ ಎಂದು ಅನಂತಪುರ ಜಿಲ್ಲಾ ಎಸ್ಪಿ ಜಗದೀಶ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಅಪರಾಧವಾಗಿದ್ದು, ಜನಜೀವನಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಿ ಸಾರ್ವಜನಿಕ ಶಾಂತಿ ಕದಡುವವರ ವಿರುದ್ಧ ವಿಶೇಷ ಅಭಿಯಾನವನ್ನೂ ನಡೆಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಿದ್ದಕ್ಕಾಗಿ 85 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಮದ್ಯ ಸೇವಿಸಿ ವಾಹನ ಚಲಾಯಿಸಿದ 16 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಸ್ತೆ ಸುರಕ್ಷತೆ ಉಲ್ಲಂಘನೆಗಾಗಿ 584 ಪ್ರಕರಣಗಳನ್ನು ದಾಖಲಿಸಿ ₹1,29,650 ದಂಡ ವಿಧಿಸಲಾಗಿದೆ

ಅಲ್ಲದೆ ಆರ್‌ಟಿಸಿ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳಲ್ಲಿ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 98 ಮಂದಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಪರಿಶೀಲಿಸಲಾಗಿದೆ. ಅವರಲ್ಲಿ ನಾಲ್ವರನ್ನು ಠಾಣೆಗೆ ಕರೆದೊಯ್ದು ವಿಚಾರಣೆಯನ್ನೂ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಎಟಿಎಂಗಳಲ್ಲೂ ಹಲವು ತೊಂದರೆಗಳಾಗುತ್ತಿದ್ದು, ಇದಕ್ಕೂ ಕ್ರಮ ಕೈಗೊಳ್ಳಲಾಗಿದೆ.

ಹೀಗೆ ರಸ್ತೆ, ಫುಟ್‌ಪಾತ್‌, ಉದ್ಯಾನವನ, ವ್ಯಾಪಾರ ಸ್ಥಳ ಅಥವಾ ಉಪನಗರಗಳಲ್ಲಿ ಮದ್ಯ ಸೇವಿಸಿ ಸಿಕ್ಕಿಬಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ ಜನರ ಶಾಂತಿ ಮತ್ತು ಭದ್ರತೆಗೆ ಭಂಗ ತರುವ ಯಾವುದೇ ಕೆಲಸ ಮಾಡಿದ್ರೂ ಇನ್ಮುಂದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಮದ್ಯ ವ್ಯಸನದಿಂದ ವ್ಯಕ್ತಿ ಜೀವನಕ್ಕೆ ಮಾತ್ರವಲ್ಲದೆ ಸಮಾಜಕ್ಕೂ ಹಾನಿಕಾರಕವಾಗಿದ್ದು, ಇದರ ವಿರುದ್ಧ ಕಠಿಣ ನಿಯಮಾವಳಿಗಳ ಅಗತ್ಯವಿದೆ ಎಂದು ಎಸ್ಪಿ ಈ ವೇಳೆ ಎಚ್ಚರಿಸಿದರು. ಕೆಲರಾಜ್ಯಗಳಲ್ಲಿ ಈ ಬಗ್ಗೆ ಈಗಾಗಲೇ ಕ್ರಮಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ದೇಶದಾದ್ಯಂತ ಬರುವ ಸಾಧ್ಯತೆ ಇದೆ.


Share to all

You May Also Like

More From Author