ಪರ್ತ್ನಲ್ಲಿ ಬೂಮ್ರಾ ಆರ್ಭಟ: ಹಿರಿಯರ ಶ್ರೇಷ್ಟ ದಾಖಲೆಗಳೆಲ್ಲಾ ಉಡೀಸ್!

Share to all

ಪರ್ತ್​​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಬೂಮ್ರಾ ಆರ್ಭಟ ತೋರಿದ್ದು, ಹಿರಿಯರ ಶ್ರೇಷ್ಟ ದಾಖಲೆಗಳೆಲ್ಲಾ ಉಡೀಸ್ ಆಗಿದೆ. ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದಲ್ಲೇ 7 ವಿಕೆಟ್​ಗಳನ್ನು ಕಳೆದುಕೊಂಡು ಇವತ್ತಿಗೆ ಬ್ಯಾಟಿಂಗ್ ಕಾಯ್ದುಕೊಂಡಿತ್ತು. ಅದರಂತೆ ಬ್ಯಾಟಿಂಗ್ ಮುಂದುವರೆಸಿದ ಆಸಿಸ್​ ಬೇಗನೇ ಆಟ ಮುಗಿಸಿದೆ. ಎದುರಾಳಿಗಳ ವಿರುದ್ಧ ಮಾರಕ ಬೌಲಿಂಗ್ ಪ್ರದರ್ಶನ ಮಾಡಿದ ಜಸ್​ಪ್ರಿತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಯಂಗ್​​ಗನ್ ಹರ್ಷಿತ್ ರಾಣಾ ವಿಕೆಟ್​​ಗಳನ್ನ ಕಬಳಿಸಿ ಸಂಭ್ರಮಿಸಿದರು. ಇವರ ಎಸೆತಗಳಲ್ಲಿ ರನ್ ಗಳಿಸಲು ಬ್ಯಾಟ್ಸ್​ಮನ್​ಗಳು ಪರದಾಡಿದರು.

ಮೊದಲ ಇನ್ನಿಂಗ್ಸ್​ನಲ್ಲಿ ಬಲಿಷ್ಠ ಬೌಲಿಂಗ್ ಪ್ರದರ್ಶನ ಮಾಡಿದ ಜಸ್​ಪ್ರಿತ್ ಬೂಮ್ರಾ 18 ಓವರ್​ಗಳನ್ನು ಬೌಲಿಂಗ್ ಮಾಡಿದ್ದು ಇದರಲ್ಲಿ 6 ಓವರ್​​ ಮೆಡಿನ್ ಆಗಿವೆ. ಕೇವಲ 30 ರನ್​ಗಳನ್ನು ಮಾತ್ರ ಕೊಟ್ಟು 5 ವಿಕೆಟ್​ ಕಬಳಿಸಿದರು. ಮೊಹಮ್ಮದ್ ಸಿರಾಜ್ ಆಕ್ರಮಣಕಾರಿ ಬೌಲಿಂಗ್ ಮಾಡಿದರು. ಇವರು 13 ಓವರ್​ಗಳನ್ನು ಹಾಕಿ 7 ಮೆಡಿನ್ ಓವರ್ ಮಾಡಿ 20 ರನ್​ಗೆ 2 ವಿಕೆಟ್​ಗಳನ್ನು ಕಿತ್ತಿದ್ದರು. ಇನ್ನುಳಿದಂತೆ ತಂಡಕ್ಕೆ ಡೆಬ್ಯು ಮಾಡಿರುವ ಹರ್ಷಿತ್ ರಾಣಾ ಮೊದಲ ಪಂದ್ಯದಲ್ಲೇ ಭರ್ಜರಿ ಬೌಲಿಂಗ್ ಮಾಡಿದ್ದಾರೆ. 15.2 ಓವರ್​ಗಳನ್ನು ಮಾಡಿದ ರಾಣಾ ಅವರು 3 ಮೆಡಿನ್ ಮಾಡಿದ್ದು 48 ರನ್​ ಕೊಟ್ಟು 3 ವಿಕೆಟ್​ಗಳನ್ನ ಬೇಟೆಯಾಡಿದ್ದಾರೆ.

ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 150 ರನ್​ಗೆ ಆಲೌಟ್ ಆಗಿತ್ತು. ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್​ಮನ್​ಗಳು 104 ರನ್​ಗೆ ಆಲೌಟ್ ಆಗಿದ್ದಾರೆ. ಇದರಿಂದ ಬೂಮ್ರಾ ನೇತೃತ್ವದ ಭಾರತ ತಂಡ 46 ರನ್​ಗಳ ಮುನ್ನಡೆಯಲ್ಲಿದೆ.

ಬಾರ್ಡರ್ ಗವಾಸ್ಕರ್​ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಅವರು ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವವನ್ನು ಬುಮ್ರಾ ವಹಿಸಿಕೊಂಡಿದ್ದಾರೆ. ಹೀಗಾಗಿ ನಾಯಕತ್ವದ ಜೊತೆಗೆ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಜವಬ್ದಾರಿ ಬುಮ್ರಾ ಮೇಲಿತ್ತು. ಈ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಬುಮ್ರಾ, ಮೊದಲ ದಿನ 10 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಪಡೆದರು.

ಈ ಮೂಲಕ ಬುಮ್ರಾ, ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತದ ಬೌಲರ್​ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ತಲುಪಿದ್ದಾರೆ. ಬುಮ್ರಾ ಆಸ್ಟ್ರೇಲಿಯಾ ನೆಲದಲ್ಲಿ ಎಂಟನೇ ಟೆಸ್ಟ್ ಆಡುತ್ತಿದ್ದು ಇದುವರೆಗೆ 35 ವಿಕೆಟ್ ಪಡೆದಿದ್ದಾರೆ.

ಇದರೊಂದಿಗೆ ಅವರು ಆಸ್ಟ್ರೇಲಿಯಾದಲ್ಲಿ 35 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಮಾಜಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಅವರ ದಾಖಲೆಯನ್ನು ಮುರಿದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಕಪಿಲ್ ದೇವ್ (51 ವಿಕೆಟ್), ಅನಿಲ್ ಕುಂಬ್ಳೆ (49 ವಿಕೆಟ್) ಮತ್ತು ರವಿಚಂದ್ರನ್ ಅಶ್ವಿನ್ (39 ವಿಕೆಟ್) ಮಾತ್ರ ಅವರಿಗಿಂತ ಮುಂದಿದ್ದಾರೆ.

ಇದಲ್ಲದೆ ಆಸೀಸ್ ಬ್ಯಾಟಿಂಗ್ ವಿಭಾಗದ ಮೊದಲ 3 ವಿಕೆಟ್ಗಳನ್ನು ಉರುಳಿಸಿದ ಜಸ್ಪ್ರೀತ್ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಬರೆದಿದ್ದು, ಡೇಲ್ ಸ್ಟೇನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಬುಮ್ರಾ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದರು. ಇದರೊಂದಗೆ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎನಿಸಿಕೊಂಡರು. ಬುಮ್ರಾಗೂ ಮೊದಲು ಡೇಲ್ ಸ್ಟೇನ್ ಮಾತ್ರ ಸ್ಮಿತ್‌ರನ್ನು ಗೋಲ್ಡನ್ ಡಕ್‌ಗೆ ಹೊರಹಾಕಿದ್ದರು.


Share to all

You May Also Like

More From Author