2025ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇದು ವಿದೇಶದಲ್ಲಿ ನಡೆಯುತ್ತಿರುವ ಎರಡನೇ ಹರಾಜು. ಹರಾಜಿನಲ್ಲಿ ಒಟ್ಟು 1,574 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ ಫ್ರಾಂಚೈಸಿಗಳ ಸೂಚನೆಯ ಮೇರೆಗೆ ಬಿಸಿಸಿಐ 577 ಆಟಗಾರರನ್ನು ಶಾರ್ಟ್ಲಿಸ್ಟ್ ಮಾಡಿದೆ.
ಹರಾಜಿನಲ್ಲಿ ಭಾಗವಹಿಸಲು ಈಗಾಗಲೇ ಐಪಿಎಲ್ ಮಾಲೀಕರು, ಹರಾಜು ನಡೆಯುವ ಸ್ಥಳಕ್ಕೆ ತಲುಲಿದ್ದಾರೆ. ಈ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಗಾಳ ಹಾಕಿ ಬಲಿಷ್ಠ ತಂಡವನ್ನು ಕಟ್ಟುವ ಇರಾದೆ ಮಾಲೀಕರದ್ದಾಗಿದೆ. ಈ ನಿಟ್ಟಿನಲ್ಲಿ ಭರ್ಜರಿ ಪ್ಲ್ಯಾನ್ ನಡೆಯುತ್ತಿದೆ. ಹಾಗಿದ್ದರೆ, ಈ ಬಾರಿ ಹರಾಜಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಒಂದು ಫ್ರಾಂಚೈಸಿ ಕನಿಷ್ಠ 18 ರಿಂದ 25 ಆಟಗಾರರನ್ನು ಒಳಗೊಳ್ಳಬಹುದಾಗಿದ್ದು, ಒಟ್ಟು 577 ಆಟಗಾರರು ಕಣದಲ್ಲಿದ್ದಾರೆ. 10 ಐಪಿಎಲ್ ತಂಡಗಳು ಒಟ್ಟು 641.5 ಕೋಟಿ ರೂ. ಹಣವನ್ನು ಹರಾಜಿನಲ್ಲಿ ವಿನಿಯೋಗಿಸಲಿದೆ. ಸುಮಾರು 204 ಮಂದಿ ಆಟಗಾರರು ಆರಿಸಲ್ಪಡುವ ಸಾಧ್ಯತೆ ಇದೆ.
ಅದರಲ್ಲಿಯೂ ಮುಖ್ಯವಾಗಿ ರಿಷಬ್ ಪಂತ್ ಅತ್ಯಧಿಕ ಮೊತ್ತವನ್ನು ಬುಟ್ಟಿಗೆ ಹಾಕಿಕೊಳ್ಳುವ ಸಾಧ್ಯತೆಯನ್ನು ಐಪಿಎಲ್ ಪರಿಣಿತರು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಂತ್ ಪ್ರದರ್ಶನವೂ ಈ ಜನಪ್ರಿಯತೆಗೆ ಕಾರಣವಾಗಿದೆ. ಶತಾಯ ಗತಾಯ ಪಂತ್ ಅವರನ್ನ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೆ.ಎಲ್ ರಾಹುಲ್ರನ್ನ ಆರ್ಸಿಬಿ ಖರೀದಿಸುವ ಪ್ರಯತ್ನ ನಡೆದಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಕ್ರೀಡಾಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿರುವುದು ಪಂತ್, ಕೆ.ಎಲ್ ರಾಹುಲ್ 25 ಕೋಟಿ ರೂ. ಮೈಲಿಗಲ್ಲನ್ನು ದಾಟುವರೇ ಎಂಬುದು. ಈವರೆಗೆ ಯಾಬೊಬ್ಬ ಭಾರತೀಯ ಆಟಗಾರನೂ ಈ ಸಾಧನೆಗೆ ಪಾತ್ರವಾಗಿಲ್ಲ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಪಂತ್ 25 ಕೋಟಿ ರೂ. ಪಡೆದ ಮೊದಲ ಭಾರತೀಯ ಆಟಗಾರ ಖ್ಯಾತಿಗೆ ಯಾರು ಪಾತ್ರರಾಗುತ್ತಾರೆ ಪಾತ್ರರಾಗುವರೇ ಎಂಬುದು ಕುತೂಹಲ ಮೂಡಿಸಿದೆ.