ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ಪೂರಕ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ಇದರ ಬೆನ್ನಲ್ಲೇ ಕೊಲೆ ಕೇಸ್ ನಲ್ಲಿ ಮತ್ತೆ 20 ಕ್ಕೂ ಸಾಕ್ಷಿಗಳ ಉಲ್ಲೇಖ ಮಾಡಿರೋ ಪೊಲೀಸ್ರು, ಪ್ರಬಲ ಸಾಕ್ಷ್ಯಗಳ ಹೇಳಿಕೆ ದಾಖಲಿಸಿದ್ದಾರಂತೆ..ಇದ್ರಲ್ಲಿ ಮತ್ತೆ ದರ್ಶನ್ ಪವಿತ್ರಾಗೌಡ ಮೊಬೈಲ್ ರಿಟ್ರೀವ್ ವರದಿಗಳ ಬಗ್ಗೆ ಉಲ್ಲೇಖವಿದೆ..
ಜೊತೆಗೆ ಸಾಕಷ್ಟು ಎಫ್ ಎಸ್ ಎಲ್ ವರದಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.ಇನ್ನುಕೊಲೆ ನಡೆದ ಜಾಗದಲ್ಲಿ ದರ್ಶನ್ ಪೋಟೊ ರಹಸ್ಯ ಬೆಳಕಿಗೆ ಬಂದಿದೆ..ಸಾಕ್ಷಿದಾರನಾಗಿರುವ ಪುನೀತ್ ಮೊಬೈಲ್ ನಲ್ಲಿ ಡಿಲೀಟ್ ಆಗಿದ್ದ ಪೋಟೊಗಳು ಪತ್ತೆಯಾಗಿದೆ ಎಂದು ಉಲ್ಲೇಖಿಸಲಾಗಿದೆ..
ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ನಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ಆರೋಪವನ್ನೊತ್ತಿರುವ A6 ಜಗದೀಶ್, A7 ಅನುಕುಮಾರ್, A8 ರವಿಶಂಕರ್ ಜೊತೆ ಅಸಂಖ್ಯಾತ, ಅಗಣಿತ ಅಭಿಮಾನಿಗಳ ದಾಸ, ಅದೇ ಪಟ್ಟಣಗೆರೆ ಶೆಡ್‌ನಲ್ಲಿ ಫೋಟೊ ಕ್ಲಿಕಿಸಿಕೊಂಡಿದ್ದಾರೆ. ಪಟ್ಟಣಗೆರೆ ಶೆಡ್‌ನಲ್ಲೇ ಫೋಟೋ ತೆಗೆಸಿಕೊಂಡ ವಿಚಾರವನ್ನು ಪುನೀತ್ ಹಾಗೂ ಉಳಿದ ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ರು. ಆ ಫೋಟೋಗಳನ್ನ ಡಿಲೀಟ್ ಮಾಡಿದ್ದಾಗಿಯೂ ಪುನೀತ್ ಒಪ್ಪಿಕೊಂಡಿದ್ದ.
ಹೀಗಾಗಿ ಪುನೀತ್ ಮೊಬೈಲ್ ಹೈದ್ರಾಬಾದ್ SFLಗೆ ಕಳುಹಿಸಿ ಎಲ್ಲಾ ಪೋಟೋಗಳನ್ನ ರಿಟ್ರೀವ್ ಮಾಡಿಸಿದ್ದಾರೆ. ರಿಟ್ರೀವ್ ಆದ ಪೋಟೋದಲ್ಲಿ ಬ್ಲೂ ಕಲರ್ ಟೀ ಶರ್ಟ್ ಹಾಗೂ ಬ್ಲಾಕ್ ಕಲರ್ ಪ್ಯಾಂಟ್ ಹಾಕ್ಕೊಂಡು ಕಾಟೇರ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ದರ್ಶನ್ ದೊಡ್ಡ ಕಂಟಕವಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ತನಿಖೆ ಮಾಡಿದ್ದ ಪೊಲೀಸರು ಈ ಮೊದಲೇ ಕೋರ್ಟ್‌ಗೆ 3991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ರು. ತನಿಖೆ ಪೂರ್ಣಗೊಳ್ಳದ ಕಾರಣ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸೋದಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ರು. ಅದ್ರಂತೆ 2 ತಿಂಗಳ ಕಾಲ ತನಿಖೆ ಮಾಡಿದ ಪೊಲೀಸರು ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.