ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಗುಂಡು ಹಾರಿಸಿದ ಹುಧಾ ಸಿಸಿಬಿ ಪೊಲೀಸರು. ಇಬ್ಬರು ಅಂತರಾಜ್ಯ ದರೋಡೆಕೋರರ ಕಾಲಿಗೆ ಗುಂಡೇಟು.
ಹುಬ್ಬಳ್ಳಿ:-ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು
ನಟೋರಿಯಸ್ ದರೋಡೆಕೋರರ ಮೇಲೆ ಸಿಸಿಬಿ ಪೋಲೀಸರು ಪೈರಿಂಗ್ ಮಾಡಿದ್ದಾರೆ..
ದರೋಡೆಕೋರರಾದ ಭರತ್ ಹಾಗೂ ಫಾರೂಕ್ ಕಾಲಿಗೆ ಪೋಲೀಸರು ಗುಂಡು ಹೊಡೆದಿದ್ದಾರೆ.ಮೂಲತಃ ಮಂಗಳೂರಿನ ಭರತ್, ಫಾರುಕ್.ಕಾರ್ ಅಡ್ಡಗಟ್ಟಿ ದರೋಡೆ ಮಾಡಿದ್ದ 15 ಜನರ ಗ್ಯಾಂಗ್.
ಸಾಂಗ್ಲಿ ಮೂಲದ ರಾಹುಲ್ ಸುರ್ವೆ ಎಂಬುವರ ಕಾರನ್ನು
ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಹತ್ತಿರ ದರೋಡೆ ನಡೆಸಿದ್ದರು.
ಚಾಲಕನಿಗೆ ಬೆದರಿಗೆ ಹಾಕಿ ದರೋಡೆ ಮಾಡಿದ್ದ ಫಾರೂಕ್ ಹಾಗೂ ಭರತ್ ಗ್ಯಾಂಗ್.
ನವೆಂಬರ್ 8 ರಂದು ನಡೆದಿದ್ದ ದರೋಡೆ.ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.15 ಜನರ ಗ್ಯಾಂಗ್ ನಲ್ಲಿ ಇಬ್ಬರನ್ನು ಪೋಲೀಸರು ಆರೆಸ್ಟ್ ಮಾಡಿದ್ದರು.
ಮಂಗಳೂರಿನಲ್ಲಿ ಬಂಧಿಸಿದ್ದ ಹುಧಾ ಸಿಸಿಬಿ ಪೊಲೀಸರು
ಇಂದು ಸ್ಥಳ ಮಹಜರು ಮಾಡೋ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ
ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು
ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದೇ ಸಂದರ್ಭದಲ್ಲಿ
ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಹುಧಾ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್.
ನಟೋರಿಯಸ್ ಫಾರುಕ್ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ 17 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು.
ರಾಜ್ಯ ಹೊರ ರಾಜ್ಯದಲ್ಲಿ ಕೇಸ್ ಗಳಿವೆ.ಭರತ್ ಮೇಲೂ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ ಎಂದರು.