ಎಲ್ಲರ ಮನೆಯಲ್ಲೂ ಟಿವಿ ಇದ್ದೇ ಇದೆ. ಇದರ ಜೊತೆಗೆ ಟಿವಿ ರಿಮೋಟ್ ಸಹ ಇರುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಈ ರಿಮೋಟ್ಗಳು ಮಿಸ್ ಆಗುತ್ತವೆ. ಕೆಲವೊಮ್ಮೆ ಅವುಗಳನ್ನು ಸೋಫಾಗಳ ಅಡಿಯಲ್ಲಿ ಇಡುತ್ತಾರೆ. ಆದರೆ ಈ ಸಂದರ್ಭದಲ್ಲಿ ಟಿವಿ ಚಾನೆಲ್ ಚೇಂಜ್ ಮಾಡೋಕು ಸಾಧ್ಯವಾಗುವುದಿಲ್ಲ. ರಿಮೋಟ್ ಹಾಳಾದಾಗಲೂ ಇದೇ ಪರಿಸ್ಥಿತಿ. ಅಂತಹ ಸಂದರ್ಭಗಳಲ್ಲಿ ಸಾಕಷ್ಟು ಕಿರಿಕಿರಿ ಉಂಟಾಗುತ್ತದೆ.
ಆದರೆ ಇನ್ಮುಂದೆ ನಿಮ್ಮ ಬಳಿ ರಿಮೋಟ್ ಇಲ್ಲದಿದ್ದರೂ ಸಹ ಸ್ಮಾರ್ಟ್ಫೋನ್ನಲ್ಲಿ ಟಿವಿಯನ್ನು ನಿಯಂತ್ರಿಸಬಹುದು. ಹಾಗಿದ್ರೆ ಅದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಟಿವಿ ಮಾದರಿಗಳ ಪ್ರಮುಖ ಭಾಗವೆಂದರೆ ಟಿವಿ ರಿಮೋಟ್, ಇದರ ಸಹಾಯದಿಂದ ನೀವು ದೂರದಲ್ಲಿ ಕುಳಿತು ಟಿವಿಯನ್ನು ನಿರ್ವಹಿಸಬಹುದು, ಆದರೆ ರಿಮೋಟ್ ಹಾನಿಗೊಳಗಾದರೆ ಟಿವಿಯನ್ನು ಹೇಗೆ ನಿರ್ವಹಿಸುವುದು ಎಂಬ ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ.
ಆದರೆ ಇಂದು ಈ ಲೇಖನದಲ್ಲಿ ನಾವು ನಿಮಗೆ ತುಂಬಾ ಸುಲಭವಾದ ಟ್ರಿಕ್ ಅನ್ನು ಹೇಳಲಿದ್ದೇವೆ ಅದರ ಸಹಾಯದಿಂದ ನೀವು ಟಿವಿ ರಿಮೋಟ್ ಹಾಳಾಗಿದ್ದರೂ ಸಹ ಸ್ಮಾರ್ಟ್‌ಫೋನ್ ಮೂಲಕ ಟಿವಿಯನ್ನು ಸುಲಭವಾಗಿ ನಿಯಂತ್ರಿಸಬಹುದು. ಇನ್ನುಂದೆ ಟಿವಿ ರಿಮೋಟ್ ಕಳೆದು ಹೋದರೆ ಚಿಂತಿಸಬೇಕಿಲ್ಲ. ನಿಮ್ಮಲ್ಲಿ ಸ್ಮಾರ್ಟ್‌ಫೋನ್ ಇದ್ದರೆ ಅದರ ಮೂಲಕ ಮನೆಯ ಟಿವಿಯನ್ನು ನೀವು ನಿಯಂತ್ರಿಸಬಹುದು.
ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿ ರಿಮೋಟ್ ಆಗಿ ಬಳಸಬಹುದು. ಗೂಗಲ್ ಟಿವಿ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಆಂಡ್ರಾಯ್ಡ್ ಟಿವಿಯನ್ನು ನೀವು ನಿಯಂತ್ರಿಸಬಹುದು. ಇಷ್ಟು ಮಾತ್ರವಲ್ಲದೆ ನೀವು ಆ್ಯಂಡ್ರಾಯ್ಡ್ ಜೊತೆಗೆ ಆ್ಯಪಲ್ ಐಫೋನ್ ನಲ್ಲೂ ಇದೇ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಈ ಟ್ರಿಕ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮುಂದೆ ತಿಳಿಯಿರಿ.
ಆಂಡ್ರಾಯ್ಡ್ ಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸುವುದು ಹೇಗೆ?
ಗೂಗಲ್ ಪ್ಲೇ ಸ್ಟೋರ್‌ನಿಂದ ಗೂಗಲ್ ಟಿವಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
ನಿಮ್ಮ ಟಿವಿ ಮತ್ತು ಮೊಬೈಲ್ ಅನ್ನು ಒಂದೇ ವೈ-ಫೈಗೆ ಸಂಪರ್ಕಿಸಿ. ಮನೆಯಲ್ಲಿ ವೈ-ಫೈ ಇಲ್ಲದಿದ್ದರೆ, ನೀವು ಬ್ಲೂಟೂತ್ ಮೂಲಕವೂ ಕನೆಕ್ಟ್ ಮಾಡಬಹುದು.
ಮೊದಲು ಅಪ್ಲಿಕೇಶನ್‌ನಲ್ಲಿ ರಿಮೋಟ್ ಬಟನ್ ಕ್ಲಿಕ್ ಮಾಡಿ.
ಈಗ ಸ್ಮಾರ್ಟ್ಫೋನ್ನಲ್ಲಿರುವ ಆ್ಯಪ್ ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ಟಿವಿ ಕಾಣಿಸಿಕೊಂಡ ತಕ್ಷಣ ಅದನ್ನು ಆಯ್ಕೆಮಾಡಿ.
ನಂತರ ನಿಮ್ಮ ಟಿವಿ ಪರದೆಯ ಮೇಲೆ ಒಂದು ಕೋಡ್ ಕಾಣಿಸುತ್ತದೆ. ಅಪ್ಲಿಕೇಶನ್‌ನಲ್ಲಿ ಆ ಕೋಡ್ ಅನ್ನು ನಮೂದಿಸಿ ಮತ್ತು ಕನೆಕ್ಟ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಒಮ್ಮೆ ನಿಮ್ಮ ಫೋನ್ ಕನೆಕ್ಟ್ ಆದರೆ, ನೀವು ಅದನ್ನು ಸಾಮಾನ್ಯ ರಿಮೋಟ್‌ನಂತೆ ಬಳಸಲು ಸಾಧ್ಯವಾಗುತ್ತದೆ.
ಐಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸುವುದು ಹೇಗೆ?
ನಿಮ್ಮ ಐಫೋನ್ ಮತ್ತು ಟಿವಿಯನ್ನು ಒಂದೇ ವೈ-ಫೈಗೆ ಸಂಪರ್ಕಪಡಿಸಿ.
ಆ್ಯಪ್ ಸ್ಟೋರ್‌ನಿಂದ ಗೂಗಲ್ ಟಿವಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿರಿ.
ಗೂಗಲ್ ಟಿವಿ ಅಪ್ಲಿಕೇಶನ್‌ನಲ್ಲಿ ಟಿವಿ ರಿಮೋಟ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಈಗ ಸ್ಮಾರ್ಟ್ಫೋನ್ನಲ್ಲಿರುವ ಆ್ಯಪ್ ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ಟಿವಿ ಕಾಣಿಸಿಕೊಂಡ ತಕ್ಷಣ ಅದನ್ನು ಆಯ್ಕೆಮಾಡಿ.
ನಿಮ್ಮ ಟಿವಿ ಪರದೆಯ ಮೇಲೆ 6 ಅಂಕಿಗಳ ಕೋಡ್ ಕಾಣಿಸುತ್ತದೆ. ಅಪ್ಲಿಕೇಶನ್‌ನಲ್ಲಿ ಕೋಡ್ ನಮೂದಿಸಿ ಮತ್ತು ಕನೆಕ್ಟ್ ಮಾಡಿ.