ಜನ್ಮ ನೀಡಿದ ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ.ಮಗನ ವಿರುದ್ದ ಹೆತ್ತವ್ವಳಿಂದ ದೂರು.
ಹುಬ್ಬಳ್ಳಿ:-ಕುಡಿಯೋದು ಬೇಡಪ್ಪಾ ಬೇಡಾ ಎಂದಿದ್ದಕ್ಕೆ ನಶೆಯಲ್ಲಿ ಮಗನೇ ತಂದೆಯನ್ನು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಎಪ್ಪತ್ತೇಳು ವರ್ಷದ ನಾಗರಾಜ ಎಂಬುವನನ್ನು ಮಗ ಅಣ್ಣಪ್ಪ ಕಳೆದ 19 ರಂದು ರಾತ್ರಿ ತಂದೆ ಬುದ್ದಿವಾದ ಹೇಳಿದ್ದಕ್ಕೆ ತಂದೆಯನ್ನೇ ಮಗ ಬಲವಾಗಿ ಹೊಡೆದಿದ್ದ. ಹೊಡೆದ ಏಟಿಗೆ ತಂದೆ ನಾಗರಾಜ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.ಈಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಈಗ ಗಂಡನ ಕಳೆದುಕೊಂಡ ಪತ್ನಿ ಮಗ ಅಣ್ಣಪ್ಪನ ವಿರುದ್ಧ ಹಳೇಹುಬ್ಬಳ್ಳಿ ಪೋಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.