ನವದೆಹಲಿ : ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಪರ್ಮನೆಂಟ್ ಅಕೌಂಟ್ ನಂಬರ್ ಅಂತಹ ಒಂದು ಡಾಕ್ಯುಮೆಂಟ್ ಆಗಿದ್ದು ಅದು ಯಾವುದೇ ಹಣಕಾಸಿನ ವಹಿವಾಟಿಗೆ ಒದಗಿಸಲು ಬಹಳ ಮುಖ್ಯವಾಗಿದೆ. ಬ್ಯಾಂಕ್ ಖಾತೆ ತೆರೆಯಲು ಅಥವಾ ಎಲ್ಲಿಯಾದರೂ ಹೂಡಿಕೆ ಮಾಡಲು ಸರ್ಕಾರಿ ಕಚೇರಿಯಲ್ಲಿ ಹಣ ವರ್ಗಾವಣೆಗೆ ಇದು ಅಗತ್ಯವಿದೆ.
ಅದರಂತೆ ಪ್ಯಾನ್ 2.0. ಎರಡನೇ ಆವೃತ್ತಿಯ ಪ್ಯಾನ್ನಲ್ಲಿ ಕ್ಯೂಆರ್ ಕೋಡ್ ಅನ್ನು ಒಳಗೊಂಡಿರಲಾಗುತ್ತದೆ. ಪ್ಯಾನ್ 2.0 ಹೆಚ್ಚು ನಿಖರವಾಗಿರುತ್ತದೆ. ಇದರ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಹೆಚ್ಚು ಸಮರ್ಪಕವಾಗಿರುತ್ತದೆ. ಸಮಸ್ಯೆಗೆ ಪರಿಹಾರ ಒದಗಿಸುವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಹೆಚ್ಚು ಮುತುವರ್ಜಿ ವಹಿಸಲಾಗುತ್ತದೆ. ನಿರ್ದಿಷ್ಟ ಸೆಕ್ಟರ್ನ ಎಲ್ಲಾ ವ್ಯವಹಾರ ಸಂಬಂಧಿತ ಚಟುವಟಿಕೆಗಳಿಗೆ ಇದು ಕಾಮನ್ ಬಿಸಿನೆಸ್ ಐಡೆಂಟಿಫೈರ್ ಆಗಿರಲಿದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೀಡಿದ ಮಾಹಿತಿ ಪ್ರಕಾರ, ಈಗಿರುವ ಪ್ಯಾನ್ ನಂಬರ್ ಅನ್ನು ಬದಲಿಸುವ ಅವಶ್ಯಕತೆ ಇಲ್ಲ. ಕಾರ್ಡ್ ಅಸಿಂಧುಗೊಳ್ಳುವುದಿಲ್ಲ. ಆದರೆ, ಅಪ್ಗ್ರೇಡ್ ಆಗಿರುವ ಹೊಸ ಪ್ಯಾನ್ ಕಾರ್ಡ್ ಪಡೆಯಬೇಕು.ಹೊಸ ಪ್ಯಾನ್ ಕಾರ್ಡ್ ಪಡೆದರೆ ಅದರಲ್ಲಿ ಹಳೆಯ ಪ್ಯಾನ್ ನಂಬರ್ ಬದಲಾಗುವುದಿಲ್ಲ. ಆದರೆ, ಕ್ಯೂಆರ್ ಕೋಡ್ನಂತಹ ಹೊಸ ಫೀಚರ್ಗಳಿರುತ್ತವೆ. ಹೊಸ ಪ್ಯಾನ್ ಕಾರ್ಡ್ಗೆ ಶುಲ್ಕ ನೀಡಬೇಕಿಲ್ಲ ಎನ್ನಲಾಗಿದೆ.
ಅಂದರೆ ಪ್ಯಾನ್ನ ಅಪ್ಗ್ರೇಡೆಡ್ ಸಿಸ್ಟಂ. ಹೊಸ ಪ್ಯಾನ್ ಕಾರ್ಡ್ನಲ್ಲಿ ಕ್ಯೂಆರ್ ಕೋಡ್ ಇತ್ಯಾದಿ ಹೊಸ ಫೀಚರ್ಗಳಿವೆ. ಕಾರ್ಡ್ ಬದಲಾದರೂ ಪ್ಯಾನ್ ನಂಬರ್ ಅದೇ ಇರುತ್ತದೆ. ಹೊಸ ಪ್ಯಾನ್ ಕಾರ್ಡ್ ಪಡೆಯಲು ಯಾರೂ ಕೂಡ ಶುಲ್ಕ ನೀಡಬೇಕಿಲ್ಲ ಎನ್ನಲಾಗಿದೆ.