ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸಲು ರಾಜ್ಯ ಸರ್ಕಾರ ತಿಣುಕಾಡುತ್ತಿದೆ – ಸಾಮಾಜಿಕ ಜಾಲ ತಾಣಗಳಲ್ಲಿ ರಾಜ್ಯ ಸರ್ಕಾರದ ವಿರುದ್ದ ಹಿಗ್ಗಾ ಮುಗ್ಗಾ ವಾಗ್ದಾಳಿ ಮಾಡಿದ ಶಾಸಕ ಅರವಿಂದ ಬೆಲ್ಲದ
ಹುಬ್ಬಳ್ಳಿ –
ರಾಜ್ಯ ಸರ್ಕಾರದ ವಿರುದ್ದ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ವಾಗ್ದಾಳಿ ನಡೆಸಿದ್ದಾರೆ.ಗ್ಯಾರಂಟಿಯಿಲ್ಲದ ಯೋಜನೆ,ಅನುದಾನವಿಲ್ಲದ ರಾಜ್ಯವಾಗಿದೆ.ಪೊಳ್ಳು ಭರವಸೆಯೊಂದಿಗೆ ಅಧಿಕಾರಕ್ಕೆ ಏರಿದ @INCKarnataka.
ಐದು ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸಲಾಗದೆ ತಿಣುಕಾಡುತ್ತಿದೆ ಎಂದಿದ್ದಾರೆ.ಇನ್ನೂ ಇಷ್ಟಕ್ಕೇ ಸಾಲದೆಂಬಂತೆ ರಾಜ್ಯದ ಜನ ಸರ್ಕಾರ ಹಾಗೂ ಗ್ಯಾರಂಟಿ ಬಗ್ಗೆ ಏನೆಂದುಕೊಳ್ಳುತ್ತಿದ್ದಾರೆ ಎಂದು ಕೋಟಿ ಕೋಟಿ ರೂಪಾಯಿ ಕೊಟ್ಟು ಸಮೀಕ್ಷೆ ಮಾಡಿಸುತ್ತಿದ್ದಾರೆ.ನಾಚಿಕೆ ಮಾನ ಎಲ್ಲವನ್ನೂ ಬಿಟ್ಟು ಜನರ ತೆರಿಗೆ ದುಡ್ಡನ್ನು ಸಂಸ್ಥೆಯೊಂದಕ್ಕೆ ನಿಯಮ ಮೀರಿ 4ಜಿ ವಿನಾಯಿತಿ ಮಾಡಿಸುವ ಮೂಲಕ ಹಣವನ್ನು ಸಂದಾಯ ಮಾಡಿದೆ ಎಂದಿದ್ದಾರೆ.
ಇದರಿಂದಾಗಿ #ATMSarkar ಕ್ಕೆ ಅವನತಿಯ ಭಯ ತುಸು ಹೆಚ್ಚೇ ಕಾಡುತಿದ್ದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಶಾಸಕರು ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ಉಲ್ಲೇಖ ಮಾಡಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ