!!!!ಕರ್ನಾಟಕ ರಕ್ಷಣಾ ವೇದಿಕೆ ಮೇಜರ್ ಸರ್ಜರಿ.ಸಂಜಯ ಪಟದಾರಿ ಹುಬ್ಬಳ್ಳಿಗೆ.!!!
ಹುಬ್ಬಳ್ಳಿ:-ಕರ್ನಾಟಕ ರಕ್ಷಣಾ ವೇದಿಕೆ ಮೇಜರ್ ಸರ್ಜರಿ ಮಾಡುವ ಮುಖಾಂತರ ಜಿಲ್ಲೆಯ ವಿವಿಧ ಘಟಕಗಳಿಗೆ, ನಗರ ಘಟಕಗಳಿಗೆ, ಗ್ರಾಮ ಘಟಕಗಳಿಗೆ ಅಧ್ಯಕ್ಷರುಗಳನ್ನು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮುಖಾಂತರ ಸಂಘಟನೆಗೆ ಹೊಸ ಹುರುಪು ಹುಮ್ಮಸ್ಸನ್ನು ನೀಡಲು ಕರವೇ ಧಾರವಾಡ ಜಿಲ್ಲಾಧ್ಯಕ್ಷರಾದ ರುದ್ರೇಶ್ ಹವಳದ ಅವರು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ.
ಅದಕ್ಕೆ ಸ್ಪಂದನೆಯಾಗಿ ಇಂದು ನೂರಾರು ಕಾರ್ಯಕರ್ತರು ಹುಬ್ಬಳ್ಳಿಯ ನೇಕಾರ ನಗರದ ತುಳಜಾಭವಾನಿ ಸಭಾಭವನದಲ್ಲಿ ಸೇರ್ಪಡೆಗೊಂಡು ಹುಬ್ಬಳ್ಳಿ ನಗರ ಘಟಕಕ್ಕೆ ಸಂಜಯ್ ಪಟದಾರಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಮುಖಾಂತರ ಹುಬ್ಬಳ್ಳಿ ನಗರಕ್ಕೆ ಹೆಚ್ಚಿನ ಒತ್ತು ನೀಡಲು ಅನೇಕ ವಾರ್ಡ್ ಗಳಿಗೆ ಅಧ್ಯಕ್ಷರನ್ನು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರವೇ ರಾಜ್ಯ ಪ್ರಧಾನ ಸಂಚಾಲಕರು ಸಾಮಾಜಿಕ ಜಾಲತಾಣ ಸಚಿನ್ ಗಾಣಿಗೇರ್ ಜಿಲ್ಲಾ ಉಪಾಧ್ಯಕ್ಷರಾದ ಪ್ರಶಾಂತ್ ಅಮರಾವತಿ ಗೌರವ ಅಧ್ಯಕ್ಷರಾದ ಕುಮಾರ್ ಪಾಟೀಲ್ ಹಾಗೂ ನೂತನ ಹುಬ್ಬಳ್ಳಿ ನಗರ ಘಟಕದ ಅಧ್ಯಕ್ಷರಾದ ಸಂಜಯ್ ಪಟದಾರಿ ಇವರ ಸಮ್ಮುಖದಲ್ಲಿ ಜಿಲ್ಲಾ ಘಟಕಕ್ಕೆ ನಗರ ಘಟಕಕ್ಕೆ ವಾರ್ಡಗಳ ಅಧ್ಯಕ್ಷರುಗಳನ್ನ ಆಯ್ಕೆ ಮಾಡಿ ನೂರಾರು ಕಾರ್ಯಕರ್ತರನ್ನ ಸೇರ್ಪಡೆಗೊಳಿಸಲಾಯಿತು.
ಕರವೇ ಸಂಘಟನೆ ಸೇರಬಯಸುವವರು ಮುಕ್ತವಾಗಿ ಸೇರಬಹುದೆಂದು ಈ ಕಾರ್ಯಕ್ರಮದಲ್ಲಿ ಕರವೇ ಧಾರವಾಡ ಜಿಲ್ಲಾ ಅಧ್ಯಕ್ಷರಾದ ರುದ್ರೇಶ್ ಹವಳದ್ ಅವರು ಮುಕ್ತ ಆಹ್ವಾನವನ್ನು ನೀಡಿದರು
ಉದಯ ವಾರ್ತೆ ಹುಬ್ಬಳ್ಳಿ.
9448334896