ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಜಂಟಲ್ ಮನ್ ಎಂದ ಶಾಸಕ ಟೆಂಗಿನಕಾಯಿ.
ಹುಬ್ಬಳ್ಳಿ:-ಆಯುಕ್ತರ ಬಗ್ಗೆ ಮೆಚ್ಚುಗೆ…
ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರನ್ನು ಹು-ಧಾ ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಯಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಪಾಲಿಕೆಯ ಓರ್ವ ಕಾಂಗ್ರೆಸ್ ಸದಸ್ಯರ ಕ್ರಮಕ್ಕೆ ಶಾಸಕ ಮಹೇಶ. ಟೆಂಗಿನಕಾಯಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕಮೀಷನರ್ ಈಶ್ವರ ಉಳ್ಳಾಗಡ್ಡಿ ಅವರು ನಿಷ್ಪಕ್ಷಪಾತ ಆಡಳಿತ ನಡೆಸುತ್ತಿದ್ದಾರೆ. ವೈಯಕ್ತಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಅವರನ್ನು ಟಾರ್ಗೆಟ್ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಅಧಿಕಾರಿಗಳಿಗೂ ಒಂದು ಚೌಕಟ್ಟು ಇರುತ್ತದೆ. ಅದನ್ನು ಅರ್ಥ ಮಾಡಿಕೊಂಡು ದಕ್ಷ ಅಧಿಕಾರಿಯ ವಿರುದ್ಧ ಈ ರೀತಿಯ ಷಢ್ಯಂತ್ರ ಮಾಡುವುದು ಸರಿಯಲ್ಲ ನಾವೆಲ್ಲಾ ಒಂದು ಟೀಮ್ ಆಗಿ ಕೆಲಸ ಮಾಡಬೇಕು ನಾನು ಶಾಸಕನಾದ ಮೇಲೆ ಹತ್ತಕ್ಕೂ ಹೆಚ್ಚು ಮೀಟಿಂಗ್ ಮಾಡಿದ್ದೇನೆ.ಮೀಟಿಂಗ್ ನಲ್ಲಿ ಬಂದ ಕೆಲ ವಿಷಯಗಳನ್ನ ಇಮಿಡಿಯೇಟ್ ಮಾಡ್ಯಾರ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯನ ವಿರುದ್ಧ ಕಿಡಿ ಕಾರಿದರು
ಪಾಲಿಕೆಯಲ್ಲಿ ಅಧಿಕಾರವಹಿಸಿಕೊಂಡ ನಂತರ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಳಿ ನಗರವನ್ನು ಅಭಿವೃದ್ಧಿ ಕಡೆಗೆ ಒಯ್ಯುವ ಕೆಲಸ ಮಾಡತಿದ್ದಾರೆ.ಈಗ ಆಯುಕ್ತರ ಮೇಲೆ ಆರೋಪ ಮಾಡುವವರು ಆಗಲಾರದ ಕೆಲಸ ತೆಗೆದುಕೊಂಡು ಹೋಗಿ ಅವರು ಮಾಡಿಲ್ಲಾ ಅಂದರೆ ಸಿಎಂ ಗೆ ಪತ್ರ ಬರೆಯೋದ ಇದು ಅಸಹ್ಯ ಅಲ್ಲೇನ್ರೀ ಅವರದೇ ಸರಕಾರ ಅವರ ಸಿಎಂ ಇಟಕೊಂಡು ಪತ್ರ ಬರೀತಾರ ಅಂದರೆ ಹೆಂಗೆ ಎಂದು ಪಾಲಿಕೆಯ ಸದಸ್ಯ ಮಾಜಿ ಮೇಯರ್ ವೀರಣ್ಣಾ ಸವಡಿ ಶಾಸಕ ಮಹೇಶ ಟೆಂಗಿನಕಾಯಿ ಮಾತಿಗೆ ಧ್ವನಿಗೂಡಿಸಿದರು..
ಉದಯ ವಾರ್ತೆ ಹುಬ್ಬಳ್ಳಿ.