ಬೆಂಗೇರಿ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರರಿಸುವಂತೆ ವಸತಿ ಮಿನಿಸ್ಟರ್ ಗೆ ರಜತ ಮನವಿ

Share to all

ಬೆಂಗೇರಿ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರರಿಸುವಂತೆ ವಸತಿ ಮಿನಿಸ್ಟರ್ ಗೆ ರಜತ ಮನವಿ

ಹುಬ್ಬಳ್ಳಿ : ಹಲವು ವರ್ಷಗಳಿಂದ ಹಕ್ಕು ಪತ್ರ ಪಡೆಯುವಲ್ಲಿ ವಿಫಲವಾಗಿ ನಿರಂತರವಾಗಿ ಹೋರಾಟ ಮಾಡುತ್ತಿರುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಬೆಂಗೆರಿ ಗ್ರಾಮದ ಖಾದಿ ಗ್ರಾಮೋದ್ಯೋಗ ಹತ್ತಿರ ಇರುವ
ಕೆರಿವಂಡಿ ಕೊಳೆಗೇರಿ ಪ್ರದೇಶದ ಜನರ ಸಮಸ್ಯೆಗೆ ಪರಿಹಾರ ನೀಡುವಂತೆ ಇಂದು ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ಕಾಂಗ್ರೆಸ್ ಯುವ ಮುಖಂಡ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಮನವಿ ಮಾಡಿದರು.

ಇಂದು ಹುಬ್ಬಳ್ಳಿಗೆ ಸಚಿವರು ಆಗಮಿಸಿದ ವೇಳೆ ಅವರನ್ನು ಬೇಟಿ ನೀಡಿ ಹಲವು ವರ್ಷಗಳಿಂದ ನಡೆದಿರುವ ತೊಂದರೆ ಬಗ್ಗೆ ಸಚಿವರಿಗೆ ವಿವರಣೆ ನೀಡಿ.218 ನಿವಾಸಿಗಳಿಗೆ ವಸತಿ ಹಕ್ಕುಪತ್ರ ವಿತರಿಸುವಂತೆ ಜಮೀರ್ ಅಹ್ಮದ್ ಖಾನ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿರುವ ಸಚಿವರು ಇನ್ನೆರೆಡು ತಿಂಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author