ಬಸವ ತತ್ವದಡಿ ಹೊಸ ಜೀವನಕ್ಕೆ ಕಾಲಿಟ್ಟ ಶೆಟ್ಟರ್ ಕುಟುಂಬದ ಕುಡಿ.. ಬಸವ ತತ್ವದಡಿ ಮದುವೆಯಾದ ಧೃವ ಮತ್ತು ಅಮೋಘಾ ಶೆಟ್ಟರ್.

Share to all

ಬಸವ ತತ್ವದಡಿ ಹೊಸ ಜೀವನಕ್ಕೆ ಕಾಲಿಟ್ಟ ಶೆಟ್ಟರ್ ಕುಟುಂಬದ ಕುಡಿ..
ಬಸವ ತತ್ವದಡಿ ಮದುವೆಯಾದ ಧೃವ ಮತ್ತು ಅಮೋಘಾ ಶೆಟ್ಟರ್.

ಹುಬ್ಬಳ್ಳಿ:- ಮಾಜಿ ಸಿಎಂ ಜಗದೀಶ ಶೆಟ್ಟರ ಸಹೋದರ ಪ್ರದೀಪ ಶೆಟ್ಟರ ಮಗಳ ಮದುವೆ ಹುಬ್ಬಳ್ಳಿಯ ಖಾಸಗಿ ಹೊಟೆಲ್ ನಲ್ಲಿ ಬಸವ ತತ್ವದಡಿ ನಡೆಯಿತು..

ಮಾಜಿ ರಾಷ್ಟ್ರಪತಿ ಬಿಡಿ ಜತ್ತಿ ಮೊಮ್ಮಗ ಧ್ರುವ ಜತ್ತಿ ಜೊತೆ ಅಮೋಘಾ ಶೆಟ್ಟರ್ ಮದುವೆ ಸಮಾರಂಭ ಮಠಾಧೀಶರ ಸಮ್ಮುಖದಲ್ಲಿವಿಜೃಂಬಣೆಯಿಂದ ನಡೆಯಿತು.ಅಮೋಘಾ ಶೆಟ್ಟರ್ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಪುತ್ರಿ.

ಬಸವಣ್ಣನ‌ ಭಾವ ಚಿತ್ರ ಕ್ಕೆ ಪೂಜೆ ಸಲ್ಲಿಸುವ ಮೂಲಕ ಮದುವೆಗೆ ಚಾಲನೆ ಕೊಟ್ಟ ಮಠಾಧೀಶರು ಬಸವಣ್ಣನ ಧರ್ಮವೇ ನಮ್ಮ ಗುರು ಎಂದು ಬಸವ ತತ್ವ ಬೋಧಿಸಿದರು.

ಮದುವೆ ಬಳಿಕ ನವಜೋಡಿಗೆ ಬಸವಣ್ಣನ ಭಾವಚಿತ್ರ ಕೊಟ್ಟು ಹರಿಸಿದ ಮಠಾಧೀಶರು.ನಮ್ಮ ಧರ್ಮ ಉಳಿಸಬೇಕಾಗಿರೋ ಪ್ರಶ್ನೆ ಬಂದಿದೆ..ಇವತ್ತು ಬಹಳ ಖುಷಿಯಾಗಿದೆ..ಬಸವಣ್ಣನ ಮಾರ್ಗದಲ್ಲಿ ನಾವು ಹೆಜ್ಜೆ ಹಾಕಿದ್ದೇವೆ ಎಂದ ಧ್ರುವ ಜತ್ತಿ.

ಗುರು ಬಸವಣ್ಣನವರ ಮಾರ್ಗದರ್ಶನ ನಾವು ಉಳಿಸಬೇಕಾಗಿದೆ..
ನಮ್ಮ ಸಮುದಾಯಾದ ವ್ಯಕ್ತಿಗಳು ವಚನ ಮಾಂಗಲ್ಯ ಕಾರ್ಯಕ್ರಮ ಮಾಡಬೇಕು ಎಂದು ಕರೆ ಕೊಟ್ಟ ಧೃವ ಜತ್ತಿ.

ಸಹೋದರ ಪ್ರದೀಪ್ ಶೆಟ್ಟರ್ ಪುತ್ರಿ ಮದುವೆ ಬಸವ ತತ್ವದಡಿ ಆಗಿದೆ.ಮಠಾಧೀಶರ ಮಾರ್ಗದರ್ಶನದಲ್ಲಿ ಮದುವೆಯಾಗಿದೆ.
ಇದೇ ಪರಂಪರೆ ಮುಂದುವರೆಯಬೇಕು.
ನಾನು ಬಸವಣ್ಣನ ಅನುಯಾಯಿ.
ಇದೇ ಮಾದರಿಯನ್ನು ಎಲ್ಲರೂ ಅನುಸರಿಸಬೇಕೆಂದ ಜಗದೀಶ್ ಶೆಟ್ಟರ್ ಹೇಳಿದರು.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author