ಹುಬ್ಬಳ್ಳಿ ಗ್ರಾಮೀಣ ಪೋಲೀಸರ ಬಿಗ್ ರೇಡ್..ಪ್ರಕರಣ ದಾಖಲಿಸಲು ಒದ್ದಾಡಿದರಾ ಆಹಾರ ಇಲಾಖೆಯ ಅಧಿಕಾರಿಗಳು.ಅಕ್ರಮ ದಂಧೆಯಲ್ಲಿ ಶಾಮೀಲಾದ ಆ ಗ್ಯಾಸ್ ಏಜೆನ್ಸಿ ಮಾಲಿಕ ಯಾರು..?
ಹುಬ್ಬಳ್ಳಿ:- ಹೌದು ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಆ್ಯಂಡ್ ಟೀಮ್ ಹುಬ್ಬಳ್ಳಿ ಹೊರವಲಯದಲ್ಲಿ ನಡೆಯುತ್ತಿದ್ದ ದೊಡ್ಡ ಪ್ರಮಾಣದ ಗ್ಯಾಸ್ ರೀಪಿಲ್ಲಿಂಗ್ ದಂಧೆಯ ಜಾಲವೊಂದನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಹೊರವಲಯದ ತಾರಿಹಾಳ ಬಳಿ ನಡೆಯುತ್ತಿದ್ದ ಗ್ಯಾಸ್ ರೀಪಿಲ್ಲಿಂಗ್ ಗೋಡೌನಗೆ ನುಗ್ಗಿದ ಪೋಲೀಸ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣನವರ ಟೀಮ್ ಕಮರ್ಷಿಯಲ್ ಹಾಗೂ ಮನೆಗಳಿಗೆ ಬಳಸುತ್ತಿದ್ದ 248 ಸಿಲಿಂಡರ್..4 ರೀಪಿಲ್ಲಿಂಗ್ ಮಷಿನ್..2 ಮಿನಿ ಗೂಡ್ಸ್ ಗಾಡಿಗಳನ್ನು ವಶಪಡಿಸಿಕೊಂಡು ಮೂವರ ಮೇಲೆ ದೂರು ದಾಖಲು ಮಾಡಿದ್ದಾರೆ.
ಈ ಅಕ್ರಮ ದಂಧೆಯ ಹಿಂದಿರುವ ಗ್ಯಾಸ್ ಏಜೆನ್ಸಿ ಯಾರದ್ದು.? ಅಕ್ರಮ ದಂಧೆ ರೇಡ್ ಆದರೂ ಆಹಾರ ಇಲಾಖೆ ದೂರು ದಾಖಲು ಮಾಡಲು ಹಿಂದೆ ಮುಂದೆ ಮಾಡಿದ್ದು ಯಾಕೆ.? ವೀಕ್ಷಿಸಿ ಉದಯ ವಾರ್ತೆಯಲ್ಲಿ..