ಪ್ರತ್ಯೇಕ ಮಹಾನಗರ ಪಾಲಿಕೆಗೆ ಕೌಂಟ್ ಡೌನ್ ಆರಂಭ..ಹತ್ತೇ ಹತ್ತು ದಿನದಲ್ಲಿ ಹೊರಬೀಳಲಿದೆ ಸರಕಾರದ ಆದೇಶ..ಧಾರವಾಡಕ್ಕೂ ಉಳ್ಳಾಗಡ್ಡಿ ಅವರೇ ಕಮೀಷನರ್ ಚಾಜ್೯….
ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಅಭಿವೃದ್ದಿ ದೃಷ್ಟಿಯಿಂದ ಪ್ರತ್ಯೇಕ ಮಹಾನಗರ ಪಾಲಿಕೆ ಆಗುವುದು ಅವಶ್ಯವಿದೆ ಎಂದು ಶಾಸಕ ಸ್ಲಮ್ ಬೋಡ್೯ ಅದ್ಯಕ್ಷ ಪ್ರಸಾದ್ ಅಬ್ಬಯ್ಯ ಸದನದಲ್ಲಿ ಒತ್ತಾಯಿಸಿದ್ದಾರೆ.
ಬೆಳಗಾವಿಯ ಚಳಿಗಾಲದ ಅದಿವೇಶನದಲ್ಲಿ ಗಮನ ಸೆಳೆಯುವ ಸೂಚನೆ ಮೇಲೆ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಕುರಿತು ಅನೇಕ ಬಾರಿ ಒತ್ತಾಯಿಸಲಾಗಿದೆ.ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್.ಶಾಸಕ ವಿನಯ ಕುಲಕರ್ಣಿ. ಸೇರಿ ಮುಖ್ಯಮಂತ್ರಿಗಳ ಜೊತೆ ಸಭೆಯನ್ನೂ ನಡೆಸಿದ್ದೇವೆ.ಆದರೆ ವಿಳಂಬ ಏಕೆ ಆಗುತ್ತಿದೆ ಎಂದು ಅಬ್ಬಯ್ಯ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಪ್ರತ್ಯೇಕ ಮಹಾನಗರ ಪಾಲಿಕೆ ಕುರಿತು ಆಡಳಿತಾತ್ಮಕ ಪ್ರಕ್ರಿಯಗಳು ನಡೆದಿದ್ದು ಹತ್ತು ದಿನದಲ್ಲಿ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗುವುದು ಎಂದರು.
ಈಗಿರುವ ಕಮೀಷನರ್ ಈಶ್ವರ ಉಳ್ಳಾಗಡ್ಡಿ ಅವರೇ ಧಾರವಾಡಕ್ಕೂ ಕಮೀಷನರ್ ಆಗಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ.