ಹುಬ್ಬಳ್ಳಿ ಡೆತ್ ನೋಟ್ ಪ್ರಕರಣ… ಡೆತ್ ಆಯತಾ ಡೆತ್ ನೋಟ್ ಹದಿನೈದು ದಿನ ಕಳೆದರೂ ಬ್ರೀಪಿಂಗ್ ಮಾಡಲಿಲ್ಲಾ ಕಮೀಷನರ್..
ಹುಬ್ಬಳ್ಳಿ:-ಕಳೆದ ತಿಂಗಳು ನವ್ಹಂಬರ 19 ರಂದು ಮಹಾಂತೇಶ ಕಲಾಲ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ನವ್ಹಂಬರ 22 ರಂದು ಸಾವನ್ನಪ್ಪಿದ್ದ.ಈಗ ಸತ್ತ ಮಹಾಂತೇಶನ ಡೆತ್ ನೋಟ್ ಏಳು ಜನ ಉಪನಗರ ಪೋಲೀಸರ ತಲೆಗೆ ಬಂದಿತ್ತು.
ಬೈಕ್ ಕಳ್ಳತನ ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ ಮಾಹಾಂತೇಶ ಡೆತ್ ನೋಟ್ ಬರೆದಿಟ್ಟು ನನ್ನ ಸಾವಿಗೆ ಹುಬ್ನಳ್ಳಿ ಉಪನಗರ ಪೋಲೀಸ ಠಾಣೆಯ ಮಲ್ಲೀಕಾರ್ಜುನ..ರೇಣು..ದಾನೇಶ್..ಅರುಣ.. ಮಂಜುನಾಥ… ಕುದುರಿ..ಹಾಗೂ ಗೋವಿಂದ ಸರ್ ಕಾರಣ ಎಂದು ಬರದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..
ಮೂರು ಮಕ್ಕಳ ತಂದೆಯಾಗಿರುವ ಮಹಾಂತೇಶ ಕಲಾಲ ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಯಾರಿಗೂ ತೋರಿಸಬೇಡಿ ಎಂದು ಹಿರಿಯ ಪೋಲೀಸ ಅಧಿಕಾರಿಯೊಬ್ಬರು ಧಮ್ಕಿ ಹಾಕಿದ್ದಾರೆಂದು ಮೃತಳ ಪತ್ನಿ ಹೇಳಿದ್ದಳು..
ಬೈಕ್ ಕಳ್ಳತನದ ಆರೋಪಿ ಸಾವು ಮತ್ತು ಡೆತ್ ನೋಟ್ ಕುರಿತು ಖಡಕ್ ಕಮೀಷನರ್ ಸಾಹೇಬ್ರು ಮಹಾಂತೇಶನ ಸಾವಿನ ರಹಸ್ಯದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕ್ರಮಕೈಕೊಳ್ಳಲಾಗಯವುದು ಅಂತಾ ಹೇಳಿದ್ದರು.
ಆ ಡೆತ್ ನೋಟ್ ಪ್ರಕರಣ ನಡೆದು ಹದಿನೈದು ದಿನ ಕಳೆದರೂ ಸಣ್ಣ ಸಣ್ಣ ವಿಷಯಕ್ಕೂ ಬ್ರೀಪಿಂಗ್ ಮಾಡುವ ಪೋಲೀಸ ಕಮೀಷನರ್ ತಮ್ಮದೇ ಇಲಾಖೆಯ ಏಳು ಜನ ಪೋಲೀಸರ ಮೇಲೆ ಡೆತ್ ನೋಟ್ ನಲ್ಲಿ ಹೆಸರು ಬರೆದಿದ್ದರೂ ಈವರೆಗೂ ಪೋಲೀಸ ಕಮೀಷನರ್ ಸಾಹೇಬ್ರು ತುಟಿ ಪಿಟಕ್ ಅಂದಿಲ್ಲಾ ಅಂದರೆ ಪೋಲೀಸರ ರಕ್ಷಣೆ ಮಾಡಿದರಾ ಅನ್ನೋ ಸಂಶಯ ವ್ಯಕ್ತವಾಗತಾ ಇದೆ.