ಒಂದೇ ಕುಟುಂಬದ ಆರು ಮಂದಿ ದುರ್ಮರಣ.ಕಂಟೇನರ್ ಕೆಳಗೆ ಸಿಲುಕಿದ ಕಾರು.ಇಬ್ಬರು ಮಕ್ಕಳು ಸೇರಿ ಆರು ಜನರ ಸಾವು…
ನೆಲಮಂಗಲ:- ವೇಗವಾಗಿ ಬಂದ ಕಂಟೇನರ್ ಪಲ್ಟಿಯಾಗಿ ಕಾರಿನ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ಆರು ಜನರು ದುರ್ಮರಣಕ್ಕೀಡಾದ ಘಟನೆ ನೆಲಮಂಗಳ ಬಳಿ ತುಮಕೂರ ಬೆಂಗಳೂರ ರಸ್ತೆಯಲ್ಲಿ ನಡೆದಿದೆ..
ವೀಕೆಂಡ ಅಂತಾ ಇಡೀ ಪ್ಯಾಮಿಲಿ ಪ್ರವಾಸಕ್ಕೆ ಹೊರಟಿತ್ತು.ಆದರೆ ವಿಧಿ ಆಟ ಬಲ್ಲವರು ಯಾರು ಅಂದಂಗಾಯ್ತು ಆ ಕುಟುಂಬದ ಪರಿಸ್ಥಿತಿ..ಹೊಸ ಕಾರು ತೆಗೆದುಕೊಂಡು ಮೂರು ತಿಂಗಳಾಗಿತ್ತು.ಹೀಗಾಗಿ ಹೊಸ ಕಾರಿನೊಂದಿಗೆ ಪ್ರವಾಸಕ್ಕೆ ಹೊರಟಿದ್ದ ಕುಟುಂಬ ಶಿವನ ಪಾದ ಸೇರಿದೆ..
ಸಾಂಗ್ಲಿ ಮೂಲದ ಎಂಜನೀಯರ್ ಕುಟುಂಬ ಎನ್ನಲಾಗಿದ್ದು ಕಂಟೇನರ್ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ.ಸ್ಥಳಕ್ಕೆ ನೆಲಮಂಗಲ ಟ್ರಾಪಿಕ್ ಪೋಲೀಸರು ಆಗಮಿಸಿದ್ದ ತನಿಖೆ ನಡೆಸಿದ್ದಾರೆ.