ಅಕ್ಕನ ಗಂಡನೇ ಅಳಿಯನ ಕೊಲೆಗೆ ಸ್ಕೆಚ್.. ಪತ್ನಿ ತವರು ಮನೆ ಸೇರಲು ಅಳಿಯನೇ ಕಾರಣ ಅಂದ ಮಾವ..ಮಾವ ನೀನೆಷ್ಟು ಕ್ರೂರಿ...
ಹುಬ್ಬಳ್ಳಿ:- ಹೌದು ಹುಬ್ಬಳ್ಳಿಯ ಮಂಟೂರ ರಸ್ತೆಯ ಶೀಲಾ ಕಾಲೋನಿಯಲ್ಲಿ ಸ್ಯಾಮುಯಲ್ಲ್ ಮಬ್ಬು ಎಂಬ ಯುವಕನನ್ನು ಅವನ ಅಕ್ಕನ ಗಂಡ ಹಾಗೂ ಗೆಳೆಯರು ಸೇರಿ ರಾಡಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..
ಸ್ಯಾಮುಯಲ್ ನ ಅಕ್ಕ ಮತ್ತು ಅವಳ ಗಂಡನ ನಡುವೆ ಜಗಳ ಬಂದು ಅಕ್ಕ ತವರು ಮನೆ ಸೇರಿದ್ದಳು.ಅದರಿಂದ ರೋಷಿ ಹೋಗಿದ್ದ ಮಾವ ನನ್ನ ಪತ್ನಿ ತವರು ಮನೆ ಸೇರಲು ಅಳಿಯನೇ ಕಾರಣ ಎಂದು ಕೊಲೆಗೆ ಈ ಹಿಂದೆ ಎರಡು ಬಾರಿ ಸ್ಕೆಚ್ ಹಾಕಿ ವಿಫಲನಾಗಿದ್ದ.ಆದರೆ ನಿನ್ನೆ ರಾತ್ರಿ ಗೆಳೆಯರೊಂದಿಗೆ ಹೊರವಲಯಕ್ಕೆ ಕರೆದುಕೊಂಡು ಹೋಗಿ ಕಣ್ಣಿಗೆ ಕಾರದ ಪುಡಿ ಎರಚಿ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ..
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಲಟ್೯ ಆದ ಬೆಂಡಿಗೇರಿ ಪೋಲೀಸರು ಕೆಲವೇ ಘಂಟೆಗಳಲ್ಲಿ ಆರೋಪಿಗಳ ಹೆಡಮುರಿ ಕಟ್ಟಿದ್ದಾರೆ ಎನ್ನಲಾಗಿದೆ.