ಹುಬ್ಬಳ್ಳಿ:-ಧಾರವಾಡ ವಿದ್ಯಾಗಿರಿಯ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಜೂನ್ 6 ರಂದು ಡಕಾಯತಿ ನಡೆಸಿದ ಸಿಸಿಟಿವಿ ದೃಶ್ಯಾವಳಿಗಳು ನೋಡಿದರೆ ನೀವೂ ಭಯ ಬೀಳುವುದು ಗ್ಯಾರಂಟಿ..
2024 ಜೂನ್ 6 ರಂದು ಧಾರವಾಡ ವಿದ್ಯಾಗಿರಿಯ ಠಾಣಾ ವ್ಯಾಪ್ತಿಯಲ್ಲಿ ಅಶೋಕ ಕದಂಬರ ಮನೆಗೆ ನುಗ್ಗಿ ಕಲ್ಲಿನಿಂದ ಬಾಗಿಲು ಒಡೆದು ಒಳ ನುಗ್ಗಿ ದಂಪತಿಗಳಿಬ್ಬರನ್ನು ಮನಬಂದಂತೆ ಥಳಿಸಿ ಡಕಾಯತಿ ಮಾಡಿದ್ದಾರೆ.
ಅದೇ ಸಿಸಿಟಿವಿ ದೃಶ್ಯಾವಳಿ ಗಳನ್ನು ಇಟ್ಟುಕೊಂಡು ಹುಬ್ಬಳ್ಳಿ-ಧಾರವಾಡ ಪೋಲೀಸರು ಚಡ್ಡಿ ಗ್ಯಾಂಗ್ ನ ಆರೋಪಿಯೊಬ್ಬನಿಗೆ ಪೈರಿಂಗ್ ಮಾಡಿ ಹಿಡಿದು ತಂದಿದ್ದಾರೆ.