ಮಡ್೯ರ್ ಕೇಸ್ ಆರೋಪಿ ಆರೆಸ್ಟ್ ಮಾಡಿದ ಕೇಶ್ವಾಪುರ ಪೋಲೀಸರು..ಯಾವುದೇ ಸುಳಿವು ಇರದ ಪ್ರಕರಣ ಪತ್ತೆ ಮಾಡಿದ ಕೇಶ್ವಾಪುರ ಕ್ರೈಂ ಟೀಂ.
ಹುಬ್ಬಳ್ಳಿ:-ಇದೇ ತಿಂಗಳು 22 ರಂದು ಕುಮಾರ ಬೆಟಗೇರಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಕೇಶ್ವಾಪುರ ಪೋಲೀಸರು ಯಶಶ್ವಿಯಾಗಿದ್ದಾರೆ.
ಪ್ರಕರಣದ ಆರೋಪಿಯಾಗಿರುವ ಮೊಹಮ್ಮದ ನದಾಪ ಕೊಲೆ ಮಾಡಿ ಯಾವುದೇ ಸಾಕ್ಷಿ ಬಿಡದೇ ಪೋಲೀಸರಿಗೆ ಚಾಲೇಂಜ್ ಎನ್ನುವ ಮಟ್ಟಿಗೆ ಪರಾರಿಯಾಗಿದ್ದ.ಪ್ರಕರಣ ಬೆನ್ನತ್ತಿದ್ದ ಕೇಶ್ವಾಪುರ ಕ್ರೈಂ ಟೀಮ್ ಕೊಲೆ ನಡೆದ ಒಂದೇ ವಾರದಲ್ಲಿ ಆರೋಪಿಯನ್ನು ಹೆಡಮುರಿ ಕಟ್ಟಿದ್ದಾರೆ.
ಆರೋಪಿಯ ಕುರಿತು ಯಾವುದೇ ಸುಳಿವು ಇರದ ಪ್ರಕರಣವನ್ನು ಪತ್ತೆ ಹಚ್ಚಿದ ಟೀಂಗೆ ಪೋಲೀಸ ಕಮೀಷನರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.