ಯಂಗ್ ಆ್ಯಂಡ್ ಎನರ್ಜಿಕ್ ಕಮೀಷನರ್ ಎಂದು ಬೆನ್ನುತಟ್ಟಿದ ಸಚಿವ ಸಂತೋಷ ಲಾಡ್..ನೀವು ಇನ್ನಷ್ಟು ಒಳ್ಳೆ ಕೆಲಸ ಮಾಡಿ ನಿಮ್ಮ ಜೊತೆಗೆ ನಾವೆಲ್ಲರೂ ಇರುತ್ತೇವೆ ಎಂದ ಲಾಡ್..
ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯೋಜಿಸಿದ್ದ ಆಸ್ತಿ ತೆರಿಗೆ ಮೇಳ ಉದ್ಘಾಟಿಸಿ ಮಾತನಾಡುವ ವೇಳೆ ಸಚಿವ ಸಂತೋಷ ಲಾಡ್ ಕಮೀಷನರ್ ಈಶ್ವರ ಉಳ್ಳಾಗಡ್ಡಿ ಅವರನ್ನು ನೋಡತಾ ಈಶ್ವರ ಅವರೇ ನೀವು ಇನ್ನೂ ಯಂಗ್ ಇದ್ದೀರಿ ಒಳ್ಳೆ ಕೆಲಸ ಮಾಡಿ ನಾವು ನಿಮ್ಮ ಜೊತೆ ಇರತೇವಿ ಅಂತಾ ಕಮೀಷನರ್ ಡಾ:ಈಶ್ವರ ಉಳ್ಳಾಗಡ್ಡಿ ಅವರಿಗೆ ಹೇಳಿದರು.
ಅಲ್ಲದೇ ನಾವು ಯಾರೂ ಇಲ್ಲೇ ಉಳಿಯಲು ಬಂದಿಲ್ಲಾ..ನಾವು ಇರುವಷ್ಟು ದಿನ ಒಳ್ಳೆ ಕೆಲಸ ಮಾಡಬೇಕು.ನಾವು ಹೋಗುವಾಗ ಇಲ್ಲಿ ನಮ್ಮ ಹೆಜ್ಜೆ ಗುರುತುಗಳು ಉಳಿಯ ಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಇದೇ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಮೇಯರ್ ಹಾಗೂ ಬಿಜೆಪಿ ಸದಸ್ಯರನ್ನು ನೋಡಿ ನೀವೂ ಸಹ ಪಕ್ಷಾತೀತವಾಗಿ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಸಹಕರಿಸಬೇಕು ಅಂತಾ ಹೇಳಿದರು.