ಬಿಡುವಿಲ್ಲದ ಕಾರ್ಯಕ್ರಮದ ಮದ್ಯೆಯೂ ಬಿಜೆಪಿ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ ಸಚಿವ ಪ್ರಹ್ಲಾದ ಜೋಶಿ.ಅಣ್ಣಪ್ಪ ಗೋಕಾಕ ಸೇರಿದಂತೆ ಹಲವರು ಸಾಥ್.

Share to all

ಬಿಡುವಿಲ್ಲದ ಕಾರ್ಯಕ್ರಮದ ಮದ್ಯೆಯೂ ಬಿಜೆಪಿ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ ಸಚಿವ ಪ್ರಹ್ಲಾದ ಜೋಶಿ.ಅಣ್ಣಪ್ಪ ಗೋಕಾಕ ಸೇರಿದಂತೆ ಹಲವರು ಸಾಥ್.

ಹುಬ್ಬಳ್ಳಿ:- ಕಳೆದ ಒಂದು ವಾರದ ಹಿಂದೆ ದುಷ್ಕರ್ಮಿಗಳಿಂದ ಚಾಕು ಇರಿತಕ್ಕೆ ಒಳಗಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತ ಮನೋಹರ ಚಾಕಲಬ್ಬಿ ಅವರ ಆರೋಗ್ಯವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಚಾರಿಸಿದರು.

ಅಲ್ಲದೇ ಕಿಮ್ಸ್ ಆಸ್ಪತ್ರೆಯ ವೈದ್ಯರಿಗೆ ಮನೋಹರ ಚಾಕಲಬ್ಬಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.ಅಲ್ಲದೇ ಮನೋಹರ ಕುಟುಂಬಕ್ಕೆ ಧೈರ್ಯ ತುಂಬಿ ನಿಮ್ಮ ಜೊತೆಗೆ ನಾವಿದ್ದೇವೆ ಅಂತಾ ಹೇಳಿದರು.

ಬಿಡುವಿಲ್ಲದ ಕಾರ್ಯಕ್ರಮದ ಮಧ್ಯೆಯೂ ಬಿಜೆಪಿ ಮುಖಂಡ ಅಣ್ಣಪ್ಪ ಗೋಕಾಕ ಅವರ ಮನವಿ ಮೇರೆಗೆ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಎಂತಹ ಸಂದರ್ಭವಿದ್ದರೂ ಕಾರ್ಯಕರ್ತರ ಜೊತೆಗೆ ಇರುತ್ತೇನೆ ಅನ್ನೋ ಸಂದೇಶವನ್ನ ಸಚಿವರ ಆಸ್ಪತ್ರೆಗೆ ಭೇಟಿ ನೀಡುವ ಮೂಲಕ ನೀಡಿದರು.

ಅಣ್ಣಪ್ಪ ಗೋಕಾಕ… ಶಿವು ಮೆಣಸಿನಕಾಯಿ..ರಾಮಣ್ಣ ಬಡಿಗೇರ..ಮಂಜುನಾಥ ಕಾಟಕರ..ಶಿವಯ್ಯ ಹಿರೇಮಠ.. ಪ್ರಕಾಶ ಬುರುಬುರೆ.. ವಿನಾಯಕ ಲದ್ವಾ..ನೀಲಕಂಠ ತಡಸದಮಠ ಭಾಗಿಯಾಗಿದ್ದರು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author