ಎಲೆ ಮರೆ ಕಾಯಂತೆ ಇದ್ದು ನಗು ಮುಖದಿಂದಲೇ ಜನರಿಗೆ ಬೆಳಕು ನೀಡುವ ಇಇ ಗಣಾಚಾರಿಗೆ ಒಲಿದು ಬಂತು ರಾಜ್ಯೋತ್ಸವ ಪ್ರಶಸ್ತಿ.
ಹುಬ್ಬಳ್ಳಿ:- ಅವರೊಬ್ಬ ಸರಳ..ಸಜ್ಜನಿಕೆಯ..ಅನುಭವಿ ನಗು ಮುಖದ ಆಡಳಿತಗಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕತ್ತಲು ಅಂತಾ ಕರೆ ಬಂದರೆ ತಕ್ಷಣ ಸ್ಪಂದಿಸುವ ಹಿರಿಯ ಅನುಭವಿ ಆಡಳಿತಗಾರ.ಈಗ ವಿದ್ಯುತ್ ವಿಭಾಗದಲ್ಲಿ ಇಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅವರ ಉತ್ತಮ ಆಡಳಿತ ಗುರುತಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ..
ಹುಬ್ಬಳ್ಳಿ ಮಹಾನಗರ ಪಾಲಿಕೆಯ ಮುಖ್ಯ ಕಛೇರಿಯ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೇಯರ್ ರಾಮಪ್ಪ ಬಡಿಗೇರ ಹಾಗೂ ಕಮೀಷನರ್ ಡಾ:ಈಶ್ವರ ಉಳ್ಳಾಗಡ್ಡಿ ಗಣಾಚಾರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
1984 ರಲ್ಲಿ ಮೆಕ್ಯಾನಿಕ್ ಎಂಜನೀಯರಾಗಿ ಸೇವೆ ಆರಂಬಿಸಿದ ಗಣಾಚಾರಿ 1991 ರಲ್ಲಿ ವಕ್೯ ಇನ್ಸ್ಪೆಕ್ಟರ್..1997 ಜ್ಯೂನಿಯರ್ ಎಂಜನೀಯರ್.1997 ಜ್ಯೂನಿಯರ್ ಎಂಜನೀಯರ್ 2004 ರಲ್ಲಿ ಎಇಇ ಆಗಿ.ಹಾಗೂ 2020 ರಿಂದ ಈವರೆಗೂ ಹುಬ್ಬಳ್ಳಿ ವಿದ್ಯುತ್ ವಿಭಾಗದಲ್ಲಿ ಇಇ ಆಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ.
ಹಗಲಿರುಳ ಪಾಲಿಕೆಯ ಕೆಲಸ ದೇವರ ಕೆಲಸ ಎಂದು ಕಾರ್ಯನಿರ್ವಹಿಸುತ್ತಿದ್ದ ಎಲೆ ಮರೆ ಕಾಯಂತಿರುವ ಗಣಾಚಾರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ಅವರ ಉತ್ತಮ ಆಡಳಿತಕ್ಕೆ ನಮ್ಮದೊಂದು ಸಲಾಮ್…