ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿದ ಡಾ.ರುದ್ರೇಶ ಘಾಳಿ..ಅಧಿಕಾರವಹಿಸಿಕೊಂಡ ಕ್ಷಣದಿಂದ ಮೀಟಿಂಗ್ ಮೇಲೆ ಮೀಟಿಂಗ್...
ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೂತನವಾಗಿ ಅಧಿಕಾರ ವಹಿಸಿಕೊಂಡ ಡಾ ರುದ್ರೇಶ್ ಘಾಳಿ ಮೀಟಿಂಗ್ ಮೇಲೆ ಮೀಟಿಂಗ್ ನಡೆಸಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು…
ಜಿಲ್ಲಾಡಳಿತದಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ರವರು ಕರೆದ ಜನತಾದರ್ಶನದಲ್ಲಿ ಭಾಗವಹಿಸಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿದರು. ನಂತರ ಹುಬ್ಬಳ್ಳಿ ಧಾರವಾಡ ಮಹಾನಗರದ ವ್ಯಾಪ್ತಿಯಲ್ಲಿ 24*7 ನಿರಂತರ ನೀರು ಸರಬರಾಜು ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ಕರೆದು ಎಲ್ಲಾ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನ ಮಾಡಲು ಎಲ್ ಅಂಡ್ ಟಿ ನಿರ್ವಾಹಕರಿಗೆ ಸೂಚಿಸಿದರು,
ಅಲ್ಲದೇ ಪ್ರಾಪರ್ಟಿ ಟ್ಯಾಕ್ಸ್ ಜಿ ಎ ಎಸ್ ಸರ್ವೆ ಹೇಗೆ ಮಾಡುತ್ತಿದ್ದಾರೆ ಹಾಗೂ ತಾಂತ್ರಿಕ ಬಿಡ್ ಭಾಗವಾದ ಪ್ರೂಫ್ ಆಫ್ ಕಾನ್ಸೆಪ್ಟ್ ಪ್ರೆಸೆಂಟೇಶನ್ ಪಡೆದುಕೊಂಡರು. ಈ ಮಧ್ಯದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ರಾಮಪ್ಪ ಬಡಿಗೇರ್ ಅವರನ್ನು ಭೇಟಿಯಾಗಿ ತಾವು ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕುರಿತು ಮಾಹಿತಿಯನ್ನು ನೀಡಿದರು.