ದೇವರಿಗೆ ಕೈ ಮುಗಿದು ದೇವಸ್ಥಾನ ಕಳ್ಳತನ – ಮುಖಕ್ಕೆ ಟಾವೆಲ್,ಮಾಸ್ಕ್ ಹಾಕಿಕೊಂಡು ಹುಂಡಿ ಹೊತ್ಯೊಯ್ದ ಖದೀಮರ ಕೃತ್ಯ ಸಿಸಿ ಟಿವಿಯಲ್ಲಿ ಬಟಾಬಯಲು
ಬೀದರ –
ಸಾಮಾನ್ಯವಾಗಿ ಅಂಗಡಿ ಮನೆ ಸೇರಿದಂತೆ ಎಲ್ಲೇಂದರಲ್ಲಿ ಕಳ್ಳತನ ಮಾಡೊದನ್ನು ಕೇಳಿದ್ದೇವೆ ನೋಡಿದ್ದೇವೆ ಆದರೆ ಕಳ್ಳರು ದೇವಸ್ಥಾನವನ್ನು ಕಳ್ಳತನ ಮಾಡಿದ ಘಟನೆ ಬೀದರ್ ನಲ್ಲಿ ನಡೆದಿದೆ.
ಹೌದು ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಸಧ್ಯ ದೇವಸ್ಥಾನಕ್ಕೂ ಕೂಡಾ ಖದೀಮರು ಸ್ಕೇಚ್ ಹಾಕುತ್ತಿದ್ದು ಯಲ್ಲಮ್ಮ ದೇವಸ್ಥಾನದಲ್ಲಿ ಕಳ್ಳತನವನ್ನು ಮಾಡಿದ ಕೃತ್ಯ ಬೆಳಕಿಗೆ ಬಂದಿದೆ
.ದೇವರಿಗೆ ಕೈ ಮುಗಿದು,ದೇವಸ್ಥಾನದ ಹುಂಡಿ ಧೋಚಿದ್ದಾರೆ ಖದೀಮರು.ಮುಖಕ್ಕೆ ಟಾವೆಲ್,ಮಾಸ್ಕ್ ಹಾಕಿಕೊಂಡು ಹುಂಡಿ ಹೊತ್ಯೊಯ್ದದ್ದಾರೆ ಕಳ್ಳ ಭಕ್ತರು.ಚಿಟಗುಪ್ಪಾ ತಾಲೂಕಿನ ಉಡಬಾಳ ಗ್ರಾಮದಲ್ಲಿ ಈ ಒಂದು ಘಟನೆ ನಡದಿದೆ.ಗ್ರಾಮದ ಯಲ್ಲಮ್ಮ ದೇವಸ್ಥಾನದಲ್ಲಿ ಖದೀಮರ ಕೈಚಳಕವು ಸೆರೆಯಾಗಿದೆ.
ಕಳ್ಳತನದ ದೃಶ್ಯ ದೇವಸ್ಥಾನದಲ್ಲಿ ಆಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕೀಲಿ ಮುರಿಯದ ಪರಿಣಾಮ ಹುಂಡಿಯನ್ನೆ ಹೊತ್ಯೊಯ್ದಿದ್ದಾರೆ ಖದೀಮರು.ಹುಂಡಿ ದೋಚಿ, ದೇವಸ್ಥಾನದ ಬಳಿಯ ಗುಡ್ಡದಲ್ಲಿ ಎಸೆದು ಹೋಗಿದ್ದಾರೆ ಖದೀಮರು.ಹುಂಡಿ ಹೊತ್ಯೊಯ್ಯುವ ದೃಶ್ಯವೂ ಕೂಡಾ ಸಿಸಿಟಿವಿಯಲ್ಲೆೇ ಸೆರೆಯಾಗಿದೆ.ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಉದಯ ವಾರ್ತೆ ಬೀದರ